ಚಿತ್ರದುರ್ಗ: ಕಾಡುಗೊಲ್ಲ ಸಮೂದಾಯವನ್ನು ಎಸ್ಟಿಗೆ ಸೇರಿಸದೆ ಹೋದರೆ ನಾನು ವಿಧಾನ ಸೌಧದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಗ್ಯಾರಂಟಿ ಎಂದು ಚಿತ್ರದುರ್ಗ ಜಿಲ್ಲಾ ಗೊಲ್ಲ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದ ರಂಗಯ್ಯನ ಬಾಗಿಲು ಬಳಿ ಇರುವ ಗೊಲ್ಲ ಸಮೂದಾಯ ಭವನ ಭೂಮಿ ಪೂಜೆ ಹಾಗೂ ನೂತನ ಸಚಿವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ 40 ವರ್ಷಗಳಿಂದ ನಾನು ಸಮೂದಾಯದ ಮಕ್ಕಳ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಆದರೆ ಸರ್ಕಾರಗಳು ಮಾತ್ರ ನಿರ್ಲಕ್ಷ್ಯ ಮಾಡುತ್ತಿದೆ ಎಂದರು.
ಮಕ್ಕಳ ಊಟ ವಸತಿ ಹಾಗೂ ಶಿಕ್ಷಣಕ್ಕೆ ನನ್ನ ಹೋರಾಟವಿದೆ. ಅತ್ಯಂತ ಹಿಂದುಳಿದ ಹೀನಾಯ ಸ್ಥಿತಿಯಲ್ಲಿರುವ ಕಾಡುಗೊಲ್ಲ ಸಮೂದಾಯವನ್ನು ಎಸ್ಟಿಗೆ ಸೇರಿಸಬೇಕು ಎಂದು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆದರೆ ಕೆಲವರು ಗೊಲ್ಲರ ಹಟ್ಟಿಗಳಲ್ಲಿ ಸಿಸಿ ರಸ್ತೆ ಮಾಡಿ ಅಭಿವೃದ್ಧಿ ಮಾಡಿದ್ದೇವೆ ಎಂದು ಫೋಸು ಕೊಡುತ್ತಿದ್ದಾರೆ ಎಂದು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಕಡೆಗೆ ನೋಡಿ ಪರೋಕ್ಷವಾಗಿ ಟಾಂಗ್ ನೀಡಿದರು.
ಇದಕ್ಕೆ ವೇದಿಕೆ ಮೇಲೆ ಕುಳಿತಿದ್ದ ಪೂರ್ಣಿಮಾ ಮನಸ್ಸಿನಲ್ಲಿಯೇ ಮಾತನಾಡಿಕೊಂಡು ಸುಮ್ಮನಾಗಿದ್ದು ಕಂಡುಬಂತು, ಕೊನೆಯದಾಗಿ ಸಚಿವರ ಸಮ್ಮುಖದಲ್ಲಿ ಗೊಲ್ಲ ಸಮೂದಾಯವನ್ನು ಎಸ್ಟಿಗೆ ಸೇರಿಸದೇ ಹೋದರೆ ವಿಧಾನ ಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೆನೆ ಎಂದು ಹೇಳಿಕೆ ನೀಡುವ ಮೂಲಕ ಎಚ್ಚರಿಸಿದರು.
PublicNext
21/08/2021 03:48 pm