ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವಿನಯ ಬಿಡುಗಡೆ ಕ್ಷಣಗಣೆ, ಬರಮಾಡಿಕೊಳ್ಳಲು ರಾಖಿ‌ ಸಮೇತ ಬಂದ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಜಾಮೀನಿನ ಮೇಲೆ ಹೊರ ಬರುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸ್ವಾಗತ ಮಾಡಲು ಖದ್ದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಹಿಂಡಲಗಾ ಜೈಲಿಗೆ ದೌಡಾಯಿಸಿದ್ದಾರೆ. 

ಹಿಂಡಲಗಾ ಜೈಲಿನ ಬಳಿ ಮಾದ್ಯಮ ಜೊತೆ ಮಾತನಾಡಿದ ಅವರು, ನಮ್ಮ ಹಿರಿಯ ಸಹೊದರ ರಕ್ಷಾ ಬಂದನನದ ಶುಭ ಸಂದರ್ಭದಲ್ಲಿ ಜೈಲಿನಿಂದ ಹೊರಗಡೆ ಬರುತ್ತಿದ್ದಾರೆ.‌ ಸಹೋದರ ಹೊರಗಡೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬರ ಮಾಡಲು ಬಂದದ್ದೇನೆ.‌ಅವರಿಗೆ  ದೈರ್ಯ ತುಂಬವ ಕೆಲಸ ಮಾಡುತ್ತೇನೆ.‌

ರಕ್ಷಾ ಬಂಧನದ ಸಂದರ್ಭದಲ್ಲಿ ಅಣ್ಣಾ ಹೊರಗಡೆ ಬರುತ್ತಿರುವ ಹಿನ್ನೆಲೆಯಲ್ಲಿ ತಂಗಿಯಾಗಿ ಬರ ಮಾಡಲು ಬಂದಿದ್ದೇನೆ. ನಾಳೆ ರಕ್ಷಾ ಬಂಧನ  ಅದಕ್ಕಾಗಿ ನಾನು ತುಂಬಾ ಯಮೋಷನಲ್ ಆಗಿದ್ದೇನೆ.‌ ರಾಜಕೀಯ ಎನು ಮಾತನಾಡಲ್ಲ.‌ ಅವರ ಹೊರ ಬಂದರೆ ನಮಗೆ ಶಕ್ತಿ ಬಂದಂತೆ ಎಂದು ತಿಳಿಸಿದರು. ‌

Edited By : Manjunath H D
PublicNext

PublicNext

21/08/2021 11:38 am

Cinque Terre

85.61 K

Cinque Terre

7