ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಫ್ಘಾನ್ ಗೆ ಹೋಗಿ ಅಗ್ಗದ ಬೆಲೆಗೆ ಪೆಟ್ರೋಲ್ ಸಿಗುತ್ತದೆ: ಬಿಜೆಪಿ ಮುಖಂಡನ ಸಲಹೆ

ಭೋಪಾಲ್ : ಅಫ್ಘಾನಿಸ್ತಾನ್ ವನ್ನು ತಾಲಿಬಾನ್ ವಶಪಡಿಸಿಕೊಂಡ ಮೇಲೆ ಅಲ್ಲಿನ ಸ್ಥಿತಿ ಹೇಳತ್ತೀರದ್ದಾಗಿದೆ. ಸದ್ಯ ಇಲ್ಲಿನ ನರಮೇಧವನ್ನು ಕಂಡ ಪ್ರತಿಯೊಬ್ಬರು ಬೆಚ್ಚಿಬೀಳುವಂತಿದೆ. ಸದ್ಯ ತೈಲ ಬೆಲೆ ಏರಿಕೆಯ ಬಗ್ಗೆ ಮಧ್ಯಪ್ರದೇಶದ ಬಿಜೆಪಿ ಮುಖಂಡರೊಬ್ಬರನ್ನು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ವಿವಾದಕ್ಕೀಡಾಗಿದೆ.

ಮಧ್ಯಪ್ರದೇಶದ ಕಟ್ನಿಯ ಜಿಲ್ಲೆಯ ಬಿಜೆಪಿ ಘಟಕದ ಮುಖ್ಯಸ್ಥ ರಾಮ್ರತನ್ ಪಾಯಲ್ ಅವರಿಗೆ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಗಗನಕ್ಕೇರುತ್ತಿರುವ ತೈಲ ಬೆಲೆ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅವರು, 'ನೀವು ತಾಲಿಬಾನ್ ಆಡಳಿತವಿರುವ ಅಫ್ಗಾನಿಸ್ತಾನಕ್ಕೆ ಹೋಗಿ. ಅಲ್ಲಿ ತೈಲದ ಬೆಲೆ ಕಡಿಮೆ ಇರುತ್ತದೆ' ಎಂದು ಸಲಹೆ ನೀಡಿದ್ದಾರೆ.

'ಅಫ್ಗಾನಿಸ್ತಾನದಲ್ಲಿ 50 ರೂ.ಗೆ ಒಂದು ಲೀಟರ್ ಪೆಟ್ರೋಲ್ ಅನ್ನು ಮಾರಾಟ ಮಾಡಲಾಗುತ್ತದೆ. ಅಲ್ಲಿ ಪೆಟ್ರೋಲ್ ಬಳಸಲು ಈಗ ಯಾರೂ ಇಲ್ಲ. ನೀವೇ ಹೋಗಿ ಪೆಟ್ರೋಲ್ ತುಂಬಿಸಿಕೊಳ್ಳಿ' ಎಂದು ಹೇಳಿದ್ದಾರೆ. ರಾಮ್ ರತನ್ ಪಾಯಲ್ ಅವರು ತೈಲ ಬೆಲೆ ಕುರಿತು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Edited By : Nirmala Aralikatti
PublicNext

PublicNext

20/08/2021 03:18 pm

Cinque Terre

201.04 K

Cinque Terre

41

ಸಂಬಂಧಿತ ಸುದ್ದಿ