ಬೆಳಗಾವಿ: ಧಾರವಾಡ ಜಿಲ್ಲೆಯ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡು ಹಿಂಡಲಗಾ ಜೈಲು ಸೇರಿದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನಿನ ಮಂಜುರಾದರು ಇನ್ನುವರೆಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರುವ ವಿನಯ್ ಕುಲಕರ್ಣಿ ಇಂದು ಬಿಡುಗಡೆ ಆದರೆ ಕುಟುಂಬ ಸದಸ್ಯರೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಬಹುದು ಎಂದು ಖುಷಿಯಲ್ಲಿದ್ದರು. ಆದರೆ ವರಮಹಾಲಕ್ಷ್ಮಿ ಹಬ್ಬವೆ ಕುಲಕರ್ಣಿ ಬಿಡುಗಡೆ ಅಡ್ಡಿ ಪಡಿಸಿದೆ. ಇಂದು ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದೆ. ಸ್ಥಳೀಯ ನ್ಯಾಯಾಲಯದಲ್ಲಿ ಜಾಮಿನು ನೀಡುವಾಗ ಮುಚ್ಚಳಿಕೆ ಪತ್ರ ನೀಡಬೇಕಿತ್ತು. ಆದರೆ ಇಂದು ರಜೆ ಇರುವ ಕಾರಣ ವಿನಯ ಕುಲಕರ್ಣಿ ಇಂದು ಸಹ ಹಿಂಡಲಗಾ ಜೈಲಿನಲ್ಲಿ ಇರುವಂತೆ ಆಗಿದೆ.
ಇಂದು ವಿನಯ ಕುಲಕರ್ಣಿ ಜೈಲಿನಿಂದ ಹೊರಗೆ ಬರಲಿದ್ದಾರೆ ಎಂದು ತಿಳಿದು ಪೊಲೀಸ್ ಭದ್ರತೆ ನೀಡಿಲಾಗಿತ್ತು. ಆದರೆ ಆ ಪೋಲಿಸ್ ಭದ್ರತೆ ಹಿಂಪಡೆಯಲಾಗಿದೆ. ನಾಳೆ ಎಲ್ಲಾ ಪ್ರಕ್ರಿಯೆಗಳು ಮುಗಿದರೆ ನಾಳೆ ಬೆಳಗ್ಗೆ 11 ಗಂಟೆಗೆ ವಿನಯ ಕುಲಕರ್ಣಿ ಜೈಲಿನಿಂದ ಹೊರಗಡೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
PublicNext
20/08/2021 02:51 pm