ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಲಿಬಾನಿ ಶೈಲಿಯಲ್ಲಿ ಟಿಎಂಸಿ ನಾಯಕರನ್ನು ಎದುರಿಸಿ ಎಂದ ಬಿಜೆಪಿ ಶಾಸಕ

ಅಗರ್ತಲಾ: ತಾಲಿಬಾನಿ ಶೈಲಿಯಲ್ಲಿ ನಾವು ಟಿಎಂಸಿ ನಾಯಕರನ್ನು ಎದುರಿಸಬೇಕಿದೆ ಎಂದು ತ್ರಿಪುರಾದ ಆಡಳಿತಾರೂಢ ಬಿಜೆಪಿ ಶಾಸಕರಾದ ಅರುಣ್ ಚಂದ್ರ ಭೌಮಿಕ್ ಹೇಳಿದ್ದಾರೆ. ಈ ಹೇಳಿಕೆ ಬಿಜೆಪಿ ಪಾಳಯದಲ್ಲಿ ಹೊಸ ವಿವಾದ ಸೃಷ್ಟಿ ಮಾಡಿದೆ.

ಆದ್ರೆ ಇದು ಪಕ್ಷದ ಅಭಿಪ್ರಾಯವಲ್ಲ. ಶಾಸಕರ ಅಭಿಪ್ರಾಯ ಎಂದು ಬಿಜೆಪಿ ಹೇಳಿದೆ. 2023ರಲ್ಲಿ ತ್ರಿಪುರಾ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಪಕ್ಷ ಸಂಘಟನೆಗಾಗಿ ಗುಡ್ಡಗಾಡು ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುವುದನ್ನು ಉದ್ದೇಶಿಸಿ ಅರುಣ್ ಚಂದ್ರ ಈ ಹೇಳಿಕೆ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

20/08/2021 10:05 am

Cinque Terre

34.22 K

Cinque Terre

11