ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 2023ಕ್ಕೆ ಕುಮಾರಸ್ವಾಮಿ ಅವರೇ ಸಿಎಂ: ಕೋನರಡ್ಡಿ

ಧಾರವಾಡ: ಬರುವ 2023ಕ್ಕೆ ಮತ್ತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವು ಬಹುಮತದ ಮೇಲೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದೇವೆ. ಯೋಗ ಹೇಗೆ ಬರುತ್ತದೆಯೋ ಹಾಗೆ ನಡೆದುಕೊಳ್ಳುತ್ತೇವೆ. ದೇಶದಲ್ಲಿ ಮೈತ್ರಿ ಯುಗ ಆರಂಭವಾಗಿದೆ. ಕುಮಾರಸ್ವಾಮಿ ಅವರು ಎಲ್ಲರ ಮನೆ, ಮನಗಳಲ್ಲಿದ್ದಾರೆ. ಹೀಗಾಗಿ ಇಂದೇ ಬರೆದಿಟ್ಟುಕೊಳ್ಳಿ ಮುಂದಿನ ಸಿಎಂ ಕುಮಾರಸ್ವಾಮಿ ಅವರೇ ಆಗುತ್ತಾರೆ ಎಂದು ಕೋನರಡ್ಡಿ ಮಾಧ್ಯಮದೆದುರು ಭವಿಷ್ಯ ನುಡಿದಿದ್ದಾರೆ.

Edited By : Manjunath H D
PublicNext

PublicNext

19/08/2021 03:23 pm

Cinque Terre

67.31 K

Cinque Terre

23

ಸಂಬಂಧಿತ ಸುದ್ದಿ