ದಾವಣಗೆರೆ: "ನನಗೆ ಯಾರೂ ವಿರೋಧಿಗಳಿಲ್ಲ. ಸಿ. ಪಿ. ಯೋಗೇಶ್ವರ್ ಸೇರಿದಂತೆ ನನ್ನ ವಿರುದ್ಧ ಮಾತನಾಡಿದವರು ನಮ್ಮವರೇ. ನಮ್ಮ ಹೋರಾಟ ಕಾಂಗ್ರೆಸ್, ಜೆಡಿಎಸ್ ವಿರುದ್ಧ. ಪ್ರತಿಪಕ್ಷಗಳ ವಿರುದ್ಧ ಅಷ್ಟೇ ನಮ್ಮ ಹೋರಾಟ'' ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಯಾರೂ ರಾಜೀನಾಮೆ ನೀಡಿ ಎಂದೇಳಿಲ್ಲ. ಅವರೇ ಸ್ವತಃ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದಾರೆ. ಸ್ವಯಂ ನಿರ್ಧಾರದಿಂದ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಬಾಂಡ್ ಬರೆದುಕೊಡಲು ಸಿಎಂ ಖುರ್ಚಿ ಪಿತ್ರಾರ್ಜಿತ ಆಸ್ತಿಯಾ. ಯಡಿಯೂರಪ್ಪರೇ ರಾಜೀನಾಮೆ ಕೊಟ್ಟರೇ ಏನು ಮಾಡಲಿಕ್ಕಾಗುತ್ತಾ. ವಿಶ್ವದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪರ ಶಕ್ತಿ ಇದೆ. ಈಗಲೂ ಪಕ್ಷ ಕಟ್ಟುವ ಕೆಲಸ ಮಾಡುವ ಶಕ್ತಿ ಇದೆ. ಯಡಿಯೂರಪ್ಪರ ವಿದಾಯದ ಭಾಷಣ ಕೇಳಿದಾಗ ನೋವಾಯ್ತು. ಅಲ್ಲಿದ್ದ ಸಚಿವರು, ಶಾಸಕರು ಕಣ್ಣೀರು ಹಾಕಿದ್ರು ಎಂದು ಹೇಳಿದರು.
ಆನಂದ್ ಸಿಂಗ್ ಅವರ ಖಾತೆ ಬದಲಾವಣೆ ಮಾಡುವುದು ಬಿಡುವುದು ಸಿಎಂ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ನಾನೇನೂ ಹೇಳಲಾಗದು.ಈಗಿರುವ ಖಾತೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
"ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಆನಂದ್ ಸಿಂಗ್ ಎಲ್ಲಿಯೂ ಹೇಳಿಲ್ಲ. ನಾನು ಮಾತನಾಡಿದ್ದೇನೆ. ನನ್ನ ಬಹಳ ಸ್ನೇಹಿತರು. ಸ್ವಾತಂತ್ರ್ಯ ದಿನಾಚರಣೆ ದಿನ ಒತ್ತಿ ಒತ್ತಿ ಕೇಳಿದಾಗ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ ಎಂಬುದಾಗಿ ಹೇಳಿದ್ದಾರಷ್ಟೇ'' ಎಂದು ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
PublicNext
18/08/2021 07:51 pm