ಚಿತ್ರದುರ್ಗ : ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನುಡುವಿನ ನೆಹರೂ ಹಾಗೂ ವಾಜಪೇಯಿ ಅವರ ವಿಚಾರವಾಗಿ ಆರೋಪ ಪ್ರತ್ಯಾರೋಪ, ಟೀಕೆ ಮತ್ತು ಹೇಳಿಕೆಗಳಿ ನೀಡುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ನೆಹರೂ ಹಾಗೂ ವಾಜಪೇಯಿ ಅವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಸಚಿವ ಶ್ರೀರಾಮುಲು ವಿನಂತಿ ಮಾಡಿಕೊಂಡರು. ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಧ್ಯಮಗಳಲ್ಲಿ ನೆಹರು ಹಾಗೂ ವಾಜಪೇಯಿರವರ ಕುರಿತಾಗಿ ಹೇಳಿಕೆಗಳು, ಟೀಕೆಗಳು ನಡೆಯುತ್ತಿವೆ.
ನೆಹರುರವರು ದೇಶದ ರಾಜಕೀಯ ಹಿರಿಯ ನಾಯಕರು ಹಾಗೆಯೇ ವಾಜಪೇಯಿರವರು ಸಹ ಹಿರಿಯ ನಾಯಕರು ಎಂದು ಸಚಿವರು ತಿಳಿಸಿದರು. ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿರವರು ಯಾವುದೋ ಕಾರಣಕ್ಕೆ ಕಟ್ಟಡದಲ್ಲಿದ್ದ ನೆಹರು ಪ್ರತಿಮೆಯನ್ನು ತೆರವುಗೊಳಿಸಲಾಗಿತ್ತು.ಇದನ್ನು ಗಮನಿಸಿದ ವಾಜಪೇಯಿರವರು ಮತ್ತೆ ಅದೇ ಸ್ಥಳದಲ್ಲಿಯೇ ಪ್ರತಿಮೆಯನ್ನು ಇರುವಂತೆ ಮಾಡಿದ್ದರು ಎಂದರು. ಹಿರಿಯ ವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಮೌಲ್ಯಯುತವಾಗಿ ಮಾಡನಾಡಬೇಕೆಂಬುದು ನನ್ನ ಭಾವನೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ನೆಹರು ಹಾಗೂ ವಾಜಪೇಯಿರವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಎರಡು ಪಕ್ಷದ ನಾಯಕರಿಗೆ ಪ್ರತಿಕ್ರಿಯೆ ನೀಡಿದರು. ಭಾರತದಲ್ಲಿ ಇಬ್ಬರು ಕೂಡಾ ಮೇರು ನಾಯಕರು. ನಾವುಗಳು ಒಂದು ಶಕ್ತಿಯಾಗಿ, ಮಾರ್ಗದರ್ಶನದಲ್ಲಿ ರಾಜಕಾರಣ ಮಾಡಬೇಕು ಎಂದು ಹೇಳಿದರು. ಯಾರನ್ನೋ ಟೀಕೆ ಮಾಡಿ ರಾಜಕಾರಣ ಮಾಡುವುದು ಸರಿಯಲ್ಲ. ಟೀಕೆ ಮಾಡಿದರೆ ರಾಜಕಾರಣ ಮೌಲ್ಯಗಳು ಉಳಿಯಲ್ಲ, ಇಬ್ಬರು ಈ ವಿಚಾರ ಇಲ್ಲಿಗೆ ನಿಲ್ಲಬೇಕು. ಮೇರು ನಾಯಕರನ್ನ ರಾಜಕಾರಣದಲ್ಲಿ ಎಳೆದು ತರುವುದು ಸರಿಯಲ್ಲ ಎಂದರು. ನಾನು 7 ಬಾರಿ ಶಾಸಕನಾಗಿದ್ದೇನೆ 4 ಬಾರಿ ಸಚಿವನಾಗಿದ್ದೇನೆ. ನನಗೆ ಸಚಿವಸ್ಥಾನದ ಬಗ್ಗೆ ಅಸಮಧಾನವೂ ಇಲ್ಲ, ಸಮಧಾನವೂ ಇಲ್ಲ. ನನಗೆ ಯಾವುದೇ ಖಾತೆ ಕೊಟ್ಟರೂ ಕಾಯ, ವಾಚ, ಮನಸ ಕೆಲಸ ಮಾಡುತ್ತೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನು ಶೀಘ್ರದಲ್ಲೇ ಸರ್ಕಾರ ಪತನ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು
ಅಧಿಕಾರ ಕಳೆದುಕೊಂಡವರು ನಮ್ಮ ಸರ್ಕಾರ ಹೋಗುತ್ತದೆ ಎಂಬ ಹಗಲುಗನಸು ಕಾಣುತ್ತಿದ್ದಾರೆ. ಮುಂದಿನ 2023 ರಲ್ಲಿ ಬಿಜೆಪಿ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿರವರು ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಸಂಭವನೀಯ 3ನೇ ಅಲೆಯ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಲಿದೆ. ರಾಜಕೀಯ ವ್ಯಕ್ತಿಗಳ ಅಧಿಕಾರ 5 ವರ್ಷಕ್ಕೆ ಸೀಮಿತ. ಅವರವರ ಅಧಿಕಾರಾವಧಿಯಲ್ಲಿ ಬದಲಾವಣೆಗಳು ಅನಿವಾರ್ಯ ಎಂದು ಹೇಳಿದರು.
PublicNext
15/08/2021 12:01 pm