ಬೆಂಗಳೂರು: ಇತ್ತಿಚೆಗೆ ಸಿಟಿ ರವಿ ಇಂದಿರಾ ಕ್ಯಾಂಟಿನ್ ಹೆಸರು ಬದಲಿಸಿ ಎನ್ನುತ್ತಿದ್ದಂತೆ ಸಾಕಷ್ಟು ಪರವಿರೋದ ವ್ಯಕ್ತವಾಗಿತ್ತು. ಬಿಜೆಪಿಗರ ಈ ನಡೆ ಕಂಡಿಸಿ ಕಾಂಗ್ರೆಸ್ ಸರಣಿ ಟ್ವಿಟ್ ಮೂಲಕ ಹೆಸರು ಬದಲಾವಣೆಯನ್ನು ವಿರೋಧಿಸಿದೆ. ಸದ್ಯ ಇನ್ನು ಆರದ ಅದೇ ಬೆಂಕಿಗೆ ತುಪ್ಪ ಸುರಿದಂತೆ ಸದ್ಯ ಕಟೀಲ್ ಟ್ವಿಟ್ ಮಾಡಿದ್ದಾರೆ.
ಹೌದು ಬಡವರ ಹೊಟ್ಟೆ ತುಂಬಿಸುವಾಗ ನಮಗೆ ಅನ್ನಪೂರ್ಣೇಶ್ವರಿ ಕಾಣುತ್ತಾಳೆಯೇ ಹೊರತು ಇಂದಿರಾ ಅಲ್ಲ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ವಿಚಾರವಾಗಿ ಶನಿವಾರ ಟ್ವೀಟ್ ಮಾಡಿರುವ ಅವರು, 'ಸಿ.ಟಿ.ರವಿ ಅವರಂತಹ ನಾಯಕರು ಪಕ್ಷ, ಸಂಘಟನೆಯಲ್ಲಿ ತಳಮಟ್ಟದಿಂದ ಕಾರ್ಯಕರ್ತರಾಗಿ ಬೆಳೆದು ಬಂದವರು. ಕುಟುಂಬದ ಸರ್ ನೇಮ್ ನಿಂದ ಪಕ್ಷದಲ್ಲಿ ಸ್ಥಾನ ಗಳಿಸಿಕೊಂಡವರಲ್ಲ. ಆದ್ದರಿಂದ, ನಮಗೆ ಬಡವರ ಹೊಟ್ಟೆ ತುಂಬಿಸುವಾಗ ಅನ್ನಪೂರ್ಣೇಶ್ವರಿ ಕಾಣುತ್ತಾಳೆ, ಇಂದಿರಾ ಅಲ್ಲ.' ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಿ, ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಸಿ.ಟಿ.ರವಿ ವಿನಂತಿಸಿದ್ದರು. ಇದೇ ವಿಚಾರಕ್ಕೆ ನಳೀನ್ ಕುಮಾರ್ ಕಟೀಲ್ ಮಾಡಿರುವ ಟ್ವಿಟ್ ಚರ್ಚೆಗೆ ಕಾರಣವಾಗಿದೆ.
PublicNext
14/08/2021 08:21 pm