ಬೆಳಗಾವಿ: ನನ್ನ ಮಿತ್ರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಕ್ಕೆ ತುಂಬಾ ಸಂತಸವಾಗಿದೆ, ಅದೆಷ್ಟು ಸಂತೋಷವಾಗಿದೆ ಎಂದರೆ ನಮ್ಮ ಗೆಳೆಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಕ್ಕೆ ಸ್ವತಃ ನಾನೇ ಸಿಎಂ ಆದ ಹಾಗೇ ಆಗಿದೆ ಎಂದು ಮಾಜಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನೂತನ ಸಿಎಮ್ ಹಾಗು ನೂತನ ಸಚಿವ ಸಂಪುಟ ರಚನೆಯತ್ತ ರಾಜಕೀಯ ಬೆಳವಣಿಗೆಗಳ ನಡುವೆ ತಮ್ಮದೆ ಆದ ಲೆಕ್ಕಾಚಾರದಲ್ಲಿದ್ದ ಜಾರಕಿಹೊಳಿ ಬ್ರದರ್ಸ್ ಅಲ್ಲಲ್ಲಿ ಅಸಮಾಧಾನಗೊಂಡ ಸಚಿವರ ಭೇಟಿಗೆ ಮುಂದಾಗಿದ್ದಾರೆ ಎಂಬ ರಾಜಕೀಯ ಮಾತುಗಳು ಇತ್ತೀಚೆಗೆ ಕೇಳಿ ಬರುತ್ತೀವೆ. ಈ ನಡುವೆ ಅವರು ಹುಬ್ಬಳ್ಳಿ, ದೆಹಲಿ, ಬೆಂಗಳೂರು ಸುತ್ತಾಡುತ್ತಿರುವದಕ್ಕೆ ಸಾಕಷ್ಟು ರಾಜಕೀಯ ಚಟುವಟಿಕೆಗಳಿಗೆ ಎಡೆ ಮಾಡಿಕೊಟ್ಟಿದೆ.
ಕೆಲವು ದಿನಗಳ ಬಳಿಕ ಶುಕ್ರವಾರ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಳಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಸಾಂಬ್ರಾ ಏರಫೊರ್ಟನಲ್ಲಿ ಮಾತ್ನಾಡಿದರು. ಈ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಮಿತ್ರ ಮಂಡಳಿ ಸದಸ್ಯರಿಗೆ ಸಚಿವ ಸ್ಥಾನ ನೀಡದ ವಿಚಾರದ ಕುರಿತು ಮಾತ್ನಾಡಿದರು. ಈ ಬಗ್ಗೆ ನಾನು ನಾಳೆ ಅಥಣಿ ಗೆ ಹೋಗಿ ಮಾತನಾಡುತ್ತೇನೆ ಎಂದಷ್ಟೇ ತಿಳಿಸಿದರು.
ಇದೆ ವೇಳೆ ಮುಂದಿನ ದಿನಗಳಲ್ಲಿ ಹೈಕಮಾಂಡ್ ಎಲ್ಲವನ್ನೂ ಸರಿಪಡಿಸುತ್ತೆ.ನಾವು ಯಾರೂ ಈಗ ಅಂಸತೋಷರಿಲ್ಲ, ಎಲ್ಲರೂ ಚನ್ನಾಗಿ ಖುಷಿಯಿಂದ ಇದ್ದೇವೆ ಎಂದು ತಿಳಿಸಿದರು.
ಸಹೋದರ ಬಾಲಚಂದ್ರ ಜಾರಕಿಹೊಳಿಗೂ ಸಚಿವ ಸ್ಥಾನ ನೀಡದ ವಿಚಾರ ಮಾತ್ನಾಡಿದ ಅವರು ನಮ್ಮ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೆವೆ ಈಗ ಏನಿದ್ದರೂ ನಮ್ಮದು 2023ರ ಚುನಾವಣೆಗೆ ತಯಾರಿ ಮಾಡ್ತಿದ್ದೇವೆ ಆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದರು. ಮತ್ತು ಪೂರ್ಣ ಪ್ರಮಾಣದ ಬಹುಮತದೊಂದಿಗೆ 2023ರಲ್ಲಿ ಸರ್ಕಾರ ತರುವ ಗುರಿ ಇದೆ ಎಂದು ಭರವಸೆ ಮಾತುಗಳ್ನಾಡಿದರು.
ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ದೆಹಲಿಯಲ್ಲಿ ಯಾವ ವರಿಷ್ಠರನ್ನು ಭೇಟಿಯಾಗಿಲ್ಲ, ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ ಅಷ್ಟೇ ಅಂತಾ ಹೇಳಿ ನುಣಚಿಕೊಂಡರು.
PublicNext
14/08/2021 09:55 am