ಬೆಳಗಾವಿ: ಸಿಎಮ್ ಬೊಮ್ಮಾಯಿ ಅವರ ನೂತನ ಸಂಪುಟ ರಚನೆಯಾದ್ರು ಅಲ್ಲಲ್ಲಿ ಕೆಲವು ರಾಜಕೀಯ ನಾಯಕರ ಅಸಮಾಧಾನ ಹೊಗೆ ಈಗಲೂ ಕೂಡಾ ಆಡುತ್ತಿದೆ. ಈ ನಡುವೆ ನಾನು ಸಿಎಮ್ ಆಗೋಕೆ ನನಗೆ ಎಲ್ಲ ಅರ್ಹತೆಗಳು ಇವೆ ಎಂದು ಪದೇ ಪದೇ ಹೇಳುತ್ತಿದ್ದ ಸಚಿವ ಉಮೇಶ್ ಕತ್ತಿ ಈಗ ಮತ್ತೆ ದೆಹಲಿಗೆ ಹೋಗಿ ಬಂದು ಸುದ್ದಿಯಲ್ಲಿದ್ದಾರೆ.
ಶುಕ್ರವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತ್ನಾಡಿದ ಸಚಿವ ಉಮೇಶ್ ಕತ್ತಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ನಾನು ನನ್ನ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ. ಆದರೆ ನಾನು ದೆಹಲಿಗೆ ಸಂತೋಷಪಟ್ಟು ಹೋಗಿ ಬಂದಿದ್ದೇನೆ,ಅಸಮಾಧಾನದಿಂದ ಹೋಗಿ ಬಂದಿಲ್ಲ ಎಂದು ತಿಳಿಸಿದರು.
ಇದೆ ವೇಳೆ ನೂತನ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರುನನಗೆ ನೀಡಿರುವ ಖಾತೆ ಬಗ್ಗೆ ಸಮಾಧಾನ ಇದೆ.ನನಗೆ ನನ್ನ ಸ್ಥಾನಮಾನದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಪುನರುಚ್ಚಿರಿಸಿದರು. ಇದೆ ವೇಳೆ ಸುದ್ದಿಗಾರರು ಸಂಪುಟ ರಚನೆ ಹಾಗು ಖಾತೆಯ ಬಗ್ಗೆ ಕ್ಯಾತೆ ತೆಗೆದು ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ತೋರಿರುವ ಆನಂದ್ ಸಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಲು ಸಚಿವ ಉಮೇಶ್ ಕತ್ತಿನಲ ನಿರಾಕರಿಸಿದರು.
ನಾನು ಆನಂದ್ ಸಿಂಗ್ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ.ಯಾವ ಖಾತೆ ನೀಡಿದ್ರು ನಿರ್ವಹಿಸಬೇಕು ಅನ್ನೋ ಹಠ ನಂಗಿದೆ ಎಂದು ಹೇಳಿದರು.
ಬೆಳಗಾವಿಯಿಂದ ನೂತನವಾಗಿ ಪ್ರಾರಂಭವಾದ ಫ್ಲೈಟ್ ಸಾಂಗ್ಲಿ, ಕೊಲ್ಲಾಪುರ, ಹುಬ್ಬಳ್ಳಿ, ರತ್ನಗಿರಿ ಸಂಚರಿಸುತ್ತೆ,ಸುಗಮವಾಗಿ ನಡೀಲಿ ಎಂದು ಹಾರೈಸಿದರು.
PublicNext
14/08/2021 09:54 am