ಯಾದಗಿರಿ: ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ಸಾಕ್ಷಾತ್ ದುರ್ಗೆ ಎಂದಿದ್ದರು. ಆದರೆ ಅವರದೇ ಪಕ್ಷದ ಈಗಿನವರು ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಮುಂದಾಗಿದ್ದಾರೆ. ಇದು ಬಿಜೆಪಿಯವರ ಚಿಲ್ಲರೆ ವಿಚಾರ. ಅವರು ಈ ಮಟ್ಟಕ್ಕೆ ಇಳಿಯಬಾರದು ಎಂದು ಬಿಜೆಪಿ ನಾಯಕರ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರ ಹೆಸರಿನಲ್ಲಿ ಕ್ರೀಡಾಂಗಣ, ಮೇಲ್ಸೇತುವೆಗಳಿವೆ ಅವರ ಹೆಸರನ್ನು ತೆಗೆಯಿರಿ ಎಂದು ನಾವು ಹೇಳಲ್ಲ. ಸಚಿವ ಈಶ್ವರಪ್ಪನವರ ಮಾತು ಅವರ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ, ಅವರ ನಾಲಿಗೆಗೆ ಮತ್ತು ಮೆದುಳಗೆ ಕನೆಕ್ಷನ್ ಕಟ್ ಆಗಿದೆ. ಸಚಿವ ಆನಂದ್ ಸಿಂಗ್ ಗೆ ತ್ಯಾಪೆ ಹಚ್ಚಿದ್ದಾರೆ. ನನ್ನ 24 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
PublicNext
13/08/2021 08:37 pm