ಗದಗ: ಎರಡು ವರ್ಷಗಳಿಂದ ಸಿ.ಸಿ.ಪಾಟೀಲರನ್ನು ಕೈ ಬಿಡುತ್ತಾರೆ ಎಂದು ನೆಗೆಟಿವ್ ಹೇಳಿದ್ದಿರಿ. ನೀವು ಎಷ್ಟು ನೆಗೆಟಿವ್ ಆಗಿ ಹೇಳಿದ್ದರೂ. ಅಷ್ಟು ನನಗೆ ರಾಜಕೀಯದಲ್ಲಿ ಪಾಸಿಟಿವ್ ಆಗಿದೆ. ನನ್ನ ಹಾಗೂ ಸಿ.ಎಂ.ಬಸವರಾಜ ಬೊಮ್ಮಾಯಿ ಅವರ ಸ್ನೇಹ ಇವತ್ತಿನದಲ್ಲ. ಆ ಸ್ನೇಹದ ಗುಟ್ಟು ನನಗೆ ಹಾಗೂ ನನ್ನ ಪಕ್ಷದ ವರಿಷ್ಟರಿಗೆ ಮಾತ್ರ ಗೊತ್ತಿದೆ. ಆ ಸ್ನೇಹದ ಗುಟ್ಟು ಬಿಟ್ಟುಕೊಟ್ಟಲ್ಲಿ ಅದನ್ನೂ ಮಾಧ್ಯಮದವರು ರಟ್ಟು ಮಾಡುತ್ತೀರಿ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ಹೊಸ ಖಾತೆಯೊಂದಿಗೆ ಗದಗ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಲೊಕೋಪಯೋಗಿ ಖಾತೆ ಸಚಿವ ಸಿ.ಸಿ.ಪಾಟೀಲ ಅವರು ಗದಗನ ನೀರಿಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ನಾನು ಸರ್ಕಾರದ ಹಾಗೂ ಸಮಾಜದ ಒಬ್ಬ ವ್ಯಕ್ತಿಯಾಗಿ ಏನನ್ನೂ ಬಹಿರಂಗಪಡಿಸಲು ಆಗುವುದಿಲ್ಲ. ಸರ್ಕಾರಕ್ಕೆ ಇರಿಸು ಮುರಿಸು ಆಗಬಾರದು. ಸಮಾಜಕ್ಕೆ ನೋವು ಆಗಬಾರದು. ಮುಖ್ಯಮಂತ್ರಿಗಳ ಜೊತೆ ವಿಶ್ವಾಸದಿಂದ ಇದ್ದು ಕೆಲಸ ಮಾಡುತ್ತೇನೆ. ಮಾಧ್ಯಮದವರ ಎದುರಿಗೆ ಈ ಬಗ್ಗೆ ನಾನು ಏನನ್ನೂ ಹೇಳಲು ಇಚ್ಛಿಸುವದಿಲ್ಲ ಎಂದು ಲೋಕೊಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
PublicNext
13/08/2021 05:25 pm