ಬೆಂಗಳೂರು: ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಬೇಕು ಎಂದುಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಸೌಧದ ಮುಂದೆ ಏಕಾಂಗಿ ಧರಣಿ ಹೋರಾಟ ನಡೆಸಿದ್ದರು. ನಂತರ ಸಿಎಂ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ ಬಳಿಕವಷ್ಟೇ ಅವರು ಧರಣಿ ಅಂತ್ಯಗೊಳಿಸಿದ್ದರು.
ಈಗ ಮತ್ತೆ ಗುಡುಗಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ಈ ಬಾರಿಯೂ ಸರ್ಕಾರದಿಂದ ಎನ್ ಡಿಆರ್ ಎಫ್ ಅನುದಾನ ಸಿಗಲಿಲ್ಲವಾದರೆ ಬೇರೆ ತರಹ ಯೋಚನೆ ಮಾಡಬೇಕಾಗುತ್ತದೆ ಎಂದು ತಮ್ಮದೇ ಸರ್ಕಾರಕ್ಕೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತೊಮ್ಮೆ ಎಚ್ಚರಿಕೆ ರವಾನಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸರ್ಕಾರವನ್ನು ಎಚ್ಚರಿಸಿ ತಾವು ಪ್ರತಿನಿಧಿಸುತ್ತಿರುವ ಮೀಸಲು ಕ್ಷೇತ್ರಕ್ಕೆ ಸಮರ್ಪಕ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡದೇ ಹೋದಲ್ಲಿ ಬೇರೆ ತರಹದ್ದೇ ಯೋಚನೆ ಮಾಡೇ ಮಾಡ್ತೇನೆ ಎಂದಿದ್ದಾರೆ.
PublicNext
13/08/2021 05:16 pm