ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲೇ ಹುಕ್ಕಾ ಬಾರ್ ತೆರೆಯಿರಿ ಎಂದು ಇಂದು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ದೇಶಭಕ್ತ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ಸಿಗರಿಗೆ ನಾನು ಇಂದಿರಾಗಾಂಧಿ ಅವರ ಕುರಿತು ಸತ್ಯ ಹೇಳಿದ್ದಕ್ಕೆ ಭಾರೀ ಕೋಪ ಬಂದಿದೆ. ಒಂದು ಕುಟುಂಬದ ಓಲೈಕೆಯೇ ನಿಮ್ಮ ಸಂಸ್ಕೃತಿಯೇ? ಇಂದಿರಾ ಕ್ಯಾಂಟೀನ್ ಬದಲು ನಾಡಿನ ಅನ್ನದ ದೇವತೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಯಾಕಾಗಬಾರದು? ಇಲ್ಲಿನ ಮಣ್ಣಿನ ಮಗನ ಹೆಸರಿಡಬಹುದಿತ್ತಲ್ಲವೇ? ರಾಷ್ಟ್ರವಾದಿ ವೀರ್ ಸವರ್ಕರ್ ಅವರನ್ನು ನಿಂದಿಸುವ ಕಾಂಗ್ರೆಸ್ಸಿಗರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸರ್ವಾಧಿಕಾರಿಯನ್ನು ನಾಡಿನ ಅಧಿ ದೇವತೆಯಂತೆ ಪೂಜಿಸುತ್ತಿದ್ದಾರೆ. ಇಂದಿರಾ ಗಾಂಧಿಯವರು ನಿಜವಾಗಲೂ ಗರೀಬಿ ಹಟಾವೋ ಮಾಡಿದ್ದಿದ್ದರೆ “ಇಂದಿರಾ ಕ್ಯಾಂಟೀನ್” ಸ್ಥಾಪಿಸುವ ಅವಶ್ಯಕತೆ ಏನಿತ್ತು? ಎಂದು ಸಿ.ಟಿ ರವಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
PublicNext
12/08/2021 07:51 pm