ಚಾಮರಾಜನಗರ: ಬಹುಜನ ಸಮಾಜ ಪಕ್ಷದಿಂದ ಉಚ್ಛಾಟನೆಯಾಗಿರುವ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಸೇರಿದ್ದಾರೆ. ಇದರ ಬೆನ್ನಲ್ಲೇ ಈ ಬಗ್ಗೆ ಅಸಮಾಧಾನಿತರಾಗಿದ್ದ ಜಿಲ್ಲೆಯ ಕೆಲ ದಲಿತ ಸಂಘಟನೆಗಳು ಎನ್.ಮಹೇಶ್ ವಿರುದ್ಧ ತಿರುಗಿ ಬಿದ್ದಿವೆ. ಇಂದು ಅವರ ವಿರುದ್ಧ ಪ್ರತಿಭಟನೆ ನಡೆಸಿವೆ.
ನಗರದ ಚಾಮರಾಜೇಶ್ವರ ದೇವಸ್ಥಾನದ ಬಳಿಯಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಬಿಎಸ್‍ಪಿ ಕಟ್ಟಿ ಮಹೇಶ ಅವರನ್ನು ಶಾಸಕರಾಗಿ ಮಾಡಲು ದುಡಿದ ಸಾವಿರಾರು ದಲಿತ ಯುವಕರಿಗೆ ಮಹೇಶ್ ದ್ರೋಹ ಮಾಡಿದ್ದಾರೆ. ಇದೀಗ ಬಿಜೆಪಿಗೆ ಸೇರಿಕೊಂಡು ತಮ್ಮ ಕ್ಷೇತ್ರದ ಜನರ ನಂಬಿಕೆ ಕಳೆದುಕೊಂಡಿದ್ದಾರೆ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
PublicNext
12/08/2021 04:17 pm