ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಂ ಬಗ್ಗೆ ಪ್ರಶ್ನೆಗಳನ್ನ ಕೇಳಿ ನನ್ನನ್ನ ಕೆಳಮಟ್ಟಕ್ಕೆ ಇಳಿಸ್ಬೇಡಿ: ಎಚ್‌.ಡಿ.ದೇವೇಗೌಡ

ನವದೆಹಲಿ: ನನಗೆ ಶಾಸಕ ಪ್ರೀತಂಗೌಡ ಬಗೆಗಿನ ಪ್ರಶ್ನೆಗಳನ್ನು ಕೇಳಬೇಡಿ. ನನ್ನನ್ನು ಅಷ್ಟು ಕೆಳ ಮಟ್ಟಕ್ಕೆ ಇಳಿಸಬೇಡಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.

ಸಂಸತ್ ಕಲಾಪದ ವಿಚಾರಗಳ ಬಗ್ಗೆ ಇಂದು ಎಚ್‌.ಡಿ. ದೇವೇಗೌಡ ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಧ್ಯಮಗಳು ಸಿಎಂ ಬಸವರಾಜ್ ಬೊಮ್ಮಾಯಿ, ಹೆಚ್.ಡಿ ದೇವೇಗೌಡರ ಭೇಟಿ ಸಂಬಂಧ ಪ್ರೀತಂಗೌಡ ವ್ಯಕ್ತಪಡಿಸಿದ ಅಸಮಾಧಾನ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನೀವು ಈ ಬಗ್ಗೆ ನನ್ನ ಮತ್ತೆ ಮತ್ತೆ ಪ್ರಶ್ನೆ ಮಾಡಬೇಡಿ. ಈ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಸಿಡಿಮಿಡಿಗೊಂಡರು.

ಸಿಎಂ ಬೊಮ್ಮಾಯಿ ಅವರು ನನ್ನ ಮನೆಗೆ ಬಂದಿದ್ದರು. ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದಿದ್ದೇನೆ ಅಷ್ಟೇ. ನೆಲ-ಜಲ-ಭಾಷೆ ವಿಚಾರವಾಗಿ ಸಹಕಾರ ನೀಡುತ್ತೇವೆ. ಜೊತೆಗೆ ರಾಜ್ಯದ ಜನತೆ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷ ಎಲ್ಲ ಸಹಕಾರಕ್ಕೂ ಸಿದ್ಧವಿದೆ ಎಂದು ಹೇಳಿರುವುದಾಗಿ ಎಚ್‌.ಡಿ. ದೇವೇಗೌಡ ಅವರು ತಿಳಿಸಿದರು.

Edited By : Vijay Kumar
PublicNext

PublicNext

12/08/2021 02:20 pm

Cinque Terre

31.32 K

Cinque Terre

3

ಸಂಬಂಧಿತ ಸುದ್ದಿ