ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಆನಂದ್ ಸಿಂಗ್ ಸಂಧಾನ ಸಭೆ ಸಕ್ಸಸ್

ಬೆಂಗಳೂರು : ಖಾತೆ ಕ್ಯಾತೆ ಗೆ ಸಂಬಧಿಸಿದಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆನಂದ್ ಸಿಂಗ್ ನಡುವಿನ ಸಂಧಾನ ಸಭೆ ಯಶಸ್ವಿಯಾಗಿದೆ.

ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬೊಮ್ಮಾಯಿ ಖಾತೆ ಬದಲಾವಣೆ ಈಗ ಮಾಡೋಕೆ ಆಗೋದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಖಾತೆ ಬದಲಾವಣೆ ಗೆ ಹೈಕಮಾಂಡ್ ಕೂಡ ಒಪ್ಪೋದಿಲ್ಲ ಎಂದು ಆನಂದ್ ಸಿಂಗ್ ಗೆ ಮನವರಿಕೆ ಮಾಡಿಕೊಟ್ಟರು.

ಅಲ್ಲದೇ ಕೇಂದ್ರ ನಾಯರನ್ನು ಒಮ್ಮೆ ಭೇಟಿ ಮಾಡಿ ಬರುವಂತೆ ಸಿಎಂ, ಆನಂದ್ ಸಿಂಗ್ ಅವರಿಗೆ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಆ. 15 ತಾರೀಖಿನ ಬಳಿಕ ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ಪ್ರವಸೋದ್ಯಮ ಖಾತೆ ಕೊಟ್ಟಿರುವುದಕ್ಕೆ ಅಸಮಾಧಾನಗೊಂಡಿದ್ದ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಿಎಸ್ ವೈ, ಇಂದು (ಆ.11) ವಿಜಯನಗರಕ್ಕೆ ಹೆಲಿಕಾಪ್ಟರ್ ಕೊಟ್ಟು ಆನಂದ್ ಸಿಂಗ್ ಅವರನ್ನು ಕರೆಯಿಸಿಕೊಂಡು ಬುದ್ಧಿ ಹೇಳಿದ್ದರು. ಬಳಿಕ ಸಿಎಂ ಸಹ ಆನಂದ್ ಸಿಂಗ್ ಅವನರನ್ನ ಮನವೊಲಿಸಿದರು.

Edited By : Nirmala Aralikatti
PublicNext

PublicNext

11/08/2021 10:53 pm

Cinque Terre

83.06 K

Cinque Terre

11