ಬಳ್ಳಾರಿ: ಬೊಮ್ಮಾಯಿ ಸರ್ಕಾರಕ್ಕೆ ಖಾತೆ ಹಂಚಿಕೆ ಕಂಟಕವಾಗಿ ಕಾಡುತ್ತಿದೆ. ಅತ್ತ ಎಂ.ಟಿ.ಬಿ ನಾಗರಾಜ್ ಇತ್ತ ಆನಂದ್ ಸಿಂಗ್, ತಮಗೆ ಕೊಟ್ಟಿರುವ ಖಾತೆಯಲ್ಲಿ ಸಮಾಧಾನ ಇಲ್ಲ ಎಂದು ಅಸಮಾಧಾನಿತರಾದ್ದಾರೆ. ಅನೇಕ ರಾಜಕೀಯ ಮೇಲಾಟಗಳ ನಡುವೆಯೇ ಇಂದು ಸಂಜೆ ಸಚಿವ ಆನಂದ್ ಸಿಂಗ್ ಹೊಸಪೇಟೆಯಲ್ಲಿದ್ದ ತಮ್ಮ ಶಾಸಕರ ಕಚೇರಿಗೆ ಬೀಗ ಹಾಕಿ ನಾಮಫಲಕ ಕೂಡ ಕಿತ್ತು ಹೋಗಿದ್ದಾರೆ. ಆನಂದ್ ಸಿಂಗ್ ಅವರ ಈ ನಡೆ ಕೌತುಕ ಕೆರಳಿಸಿದೆ.
ಪ್ರವಾಸೋದ್ಯಮ ಖಾತೆ ನೀಡಿದ ಹಿನ್ನೆಲೆ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದು, ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಈ ವೇಳೆ ಸಿಎಂ ಎರಡು ದಿನ ಸಮಯ ಕೇಳಿದ್ದರು ಎನ್ನಲಾಗಿದೆ. ಇದೀಗ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆ ಕಳೆದ 14 ವರ್ಷದಿಂದ ಹೊಸಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಕಚೇರಿಗೆ ಬೀಗ ಹಾಕಿದ್ದಾರೆ.
PublicNext
10/08/2021 10:57 pm