ಬೆಂಗಳೂರು: ಸಿಎಂ ಬೊಮ್ಮಾಯಿ ಮೇಲೆ ಒಳಬೇಗುದಿ ಹೊಂದಿರುವ ಶಾಸಕ ಪ್ರೀತಂ ಗೌಡ ಬೊಮ್ಮಾಯಿ ವಿರುದ್ಧ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ. ದೂರು ತಂದ ಪ್ರೀತಂ ಗೌಡರನ್ನು ಕೂರಿಸಿಕೊಂಡು ಹಾಲಿ ಹಾಗೂ ಮಾಜಿ ಸಿಎಂ ಗಳಿಬ್ಬರೂ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಡ್ಜಸ್ಟ್ ಮೆಂಟ್ ರಾಜಕಾರಣ ಎಂದೆಲ್ಲ ಹೇಳಬೇಡಿ. ನಿಮ್ಮ ಜಿಲ್ಲೆಯ ಸಮಸ್ಯೆ ಏನಾದರೂ ಇದ್ದಲ್ಲಿ ಅದನ್ನು ಪಕ್ಷದ ಚೌಕಟ್ಟಿನಲ್ಲಿ ಬಂದು ಚರ್ಚೆ ಮಾಡಿ. ಬೊಮ್ಮಾಯಿ ಅವರು ದೇವೇಗೌಡರನ್ನು ಭೇಟಿ ಆಗಿದ್ದರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಬೇಡ ಎಂದು ಯಡಿಯೂರಪ್ಪ ಅವರು ಶಾಸಕ ಪ್ರೀತಂ ಗೌಡಗೆ ಕ್ಲಾಸ್ ಹೇಳಿದ್ದಾರೆ.
PublicNext
10/08/2021 08:54 pm