ರಾಯಚೂರು: ಸಚಿವ ಕೆ.ಎಸ್ ಈಶ್ವರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪದೇ ಪದೇ ಬೇಜವಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ ಒತ್ತಾಯಿಸಿದ್ದಾರೆ.
ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ಧ್ರುವನಾರಾಯಣ, ಈಶ್ವರಪ್ಪ ಮೊದಲಿನಿಂದಲೂ ಇಂತಹ ಹೇಳಿಕೆ ನೀಡುವಲ್ಲಿ ನಿಸ್ಸೀಮರು. ನಾಲಿಗೆಗೆ ಎಲುಬಿಲ್ಲ, ಈಶ್ವರಪ್ಪಗೆ ಮೆದುಳು ಸಹ ಇದೆಯೋ, ಇಲ್ಲವೋ ಗೊತ್ತಿಲ್ಲ. ಇನ್ಮುಂದೆಯಾದರೂ ಇಂತಹ ಹೇಳಿಕೆ ನೀಡೋದನ್ನು ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಬರೀ ದ್ವೇಷ ಹರಡುವ ಕೆಲಸ ಈಶ್ವರಪ್ಪ ಅವರದ್ದು. ಕೆಲ ದಿನಗಳ ಮುಂಚೆ ತಲೆ ತೆಗೆಯುವ ಬಗ್ಗೆ ಮಾತಾಡಿದ್ದರು. ಈಗ ಕಾಂಗ್ರೆಸ್ ಬಗ್ಗೆ ತೀರಾ ಕೆಟ್ಟ ಪದ ಬಳಸಿ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
PublicNext
10/08/2021 04:28 pm