ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಈಶ್ವರಪ್ಪನವರಿಗೆ ಬಿಜೆಪಿ ಚಿಕಿತ್ಸೆ ಕೊಡಿಸಬೇಕು: ಮಾಜಿ ಸಚಿವ ಸೊರಕೆ ಕಿಡಿ

ಉಡುಪಿ: ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ನವರು ಕುಡುಕ ..... ಮಕ್ಕಳು ಎಂದು ಬೆಂಗಳೂರಿನ ವಿಧಾನಸೌಧ ಬಳಿ ಅವಾಚ್ಯವಾಗಿ ಹೇಳಿಕೆ ನೀಡಿರುವುದರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಕಿಡಿಕಾರಿದ್ದಾರೆ. ಈಶ್ವರಪ್ಪ ವಿರುದ್ಧ ಕಿಡಿಕಾರಿರುವ ಸೊರಕೆ ,ಇದು ಅವಾಚ್ಯ ಮತ್ತು ಅವಹೇಳನಕಾರಿ ಪದ ಬಳಕೆ. ವಿಧಾನಸೌಧಕ್ಕೆ ಬಹಳ ಪಾವಿತ್ರ್ಯತೆ ಇದೆ. ಈಶ್ವರಪ್ಪ ಒಬ್ಬ ಅನಾಗರೀಕ ವ್ಯಕ್ತಿ ಎಂದರು.

ಸಚಿವ ಈಶ್ವರಪ್ಪ ಮೆದುಳಿನ ಸಮತೋಲನ ತಪ್ಪಿದೆ. ಬಿಜೆಪಿ ಅವರ ಮೆದುಳಿನ ಪರೀಕ್ಷೆ ಮಾಡಿಸಬೇಕು. ತಲೆಯ ಪರೀಕ್ಷೆ ನಡೆಸದಿದ್ದರೆ ಮುಂದೆ ರಾಜ್ಯಕ್ಕೆ ಆಗಬಹುದಾದ ಅನಾಹುತ ಎದುರಿಸಬೇಕಾದೀತು ಎಂದರು. ಕೂಡಲೇ ಈಶ್ವರಪ್ಪ ಅವರನ್ನು ಚಿಕಿತ್ಸೆಗೆ ಒಳಪಡಿಸಬೇಕು.ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರು ಈಶ್ವರಪ್ಪನವರ ಮೆದುಳಿಗೂ ನಾಲಿಗೆಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆಗಾಗ ಇದು ಸಾಬೀತಾಗುತ್ತಿದೆ. ಶೀಘ್ರ ಈಶ್ವರಪ್ಪರಿಗೆ ಚಿಕಿತ್ಸೆ ಕೊಡಿಸಿ ಎಂದು ಬಿಜೆಪಿ ನಾಯಕರಿಗೆ ಮಾಜಿ ಸಚಿವ ವಿನಯ್ ಕುಮಾರ ಸೊರಕೆ ವ್ಯಂಗ್ಯ ವಾಡಿದ್ದಾರೆ.

Edited By : Manjunath H D
PublicNext

PublicNext

10/08/2021 03:59 pm

Cinque Terre

54.35 K

Cinque Terre

13

ಸಂಬಂಧಿತ ಸುದ್ದಿ