ಚಿತ್ರದುರ್ಗ : ರಾಜ್ಯರಾಜಕಾರಣದಲ್ಲಿಯ ಬೆಳವಣಿಗೆಗಳು ಎಲ್ಲರಿಗೂ ತಿಳಿದಿರುವ ಸತ್ಯ. ಸದ್ಯ ಖಾತೆ ಬದಲಾವಣೆ ಬಗ್ಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ. ಸರ್ಕಾರದಲ್ಲಿ ಕೆಲಸ ಮಾಡುವ ಸಮಾಧಾನವಿದೆ. ಸಾರಿಗೆ ಇಲಾಖೆ ನಷ್ಟದಲ್ಲಿದ್ದು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ರಾಜಕೀಯ ಜೀವನದಲ್ಲಿ ಅನೇಕ ಸವಾಲು ಎದುರಿಸಿದ್ದೇನೆ. ರಾಜನಾದ ಸತ್ಯ ಹರಿಶ್ಚಂದ್ರ ಸ್ಮಶಾನ ಕೆಲಸದಲ್ಲೂ ಸೈ ಎನಿಸಿಕೊಂಡಿದ್ದಾನೆ. ನಾವು ಸಹ ಸಾರಿಗೆ ಇಲಾಖೆಯಲ್ಲೂ ಸೈ ಎನ್ನಿಸಿಕೊಳ್ಳುತ್ತೇವೆ ಎಂದು ಹರಿಶ್ಚಂದ್ರ ಕಥೆಗೆ ಹೋಲಿಕೆ ಮಾಡಿದರು.
ರಾಜಕಾರಣದಲ್ಲಿ ಏನೇ ಬಂದರೂ ಸವಾಲು ಸ್ವೀಕರಿಸುತ್ತೇನೆ. ಪ್ರಧಾನಿ ಮೋದಿ ಜೊತೆ ಕೆಲಸ ಮಾಡುವುದೆ ಸಂತೋಷ, ಸಮಾಧಾನ ಎಂದರು.
PublicNext
09/08/2021 05:11 pm