ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗಿಂತಲೂ ನಾನೇ ದೊಡ್ಡವನು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು 1948 ಆಗಸ್ಟ್ 3ನೇ ತಾರೀಕಿನಂದು ಹುಟ್ಟಿದ್ದೇನೆ ಎಂದು ಮಾಸ್ಟರ್ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ್ದು 1950ರಲ್ಲಿ. ಹಾಗಾಗಿ ನಾನೇ ಮೋದಿಗಿಂತ 2 ವರ್ಷ ದೊಡ್ಡವನು" ಎಂದು ಹೇಳಿದರು.
ದೇಶದಲ್ಲಿ ಶೇ.23ರಷ್ಟು ಜನ ಬಡತನ ರೇಖೆಗಿಂತಲೂ ಕೆಳಗೆ ಹೋಗಿದ್ದಾರೆ. ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿದೆ. ಇದು ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕೊಡುಗೆ ಎಂದು ಹೇಳಿದರು.
PublicNext
09/08/2021 03:14 pm