ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ಸ್ಥಗಿತ

ನವದೆಹಲಿ: ಅಪ್ರಾಪ್ತೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೋವನ್ನು ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಶೇರ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆ ನಂತರ ಟ್ವಿಟ್ಟರ್ ಸಂಸ್ಥೆ ಆ ಫೋಟೋ ತೆಗೆದು ಹಾಕಿತ್ತು. ಇನ್ನೊಂದೆಡೆ ಸ್ಥಗಿತವಾದ ಖಾತೆಯನ್ನು ಶೀಘ್ರದಲ್ಲಿ ಸಕ್ರಿಯಗೊಳಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ರಾಹುಲ್ ಗಾಂಧಿ ಅವರ ಖಾತೆ ಸ್ಥಗಿತಗೊಂಡಿದ್ದರೂ ರಾಹುಲ್ ಮಾಡಿರುವ ಹಳೆಯ ಟ್ವೀಟ್ ಅಥವಾ ಸಂಪೂರ್ಣ ಖಾತೆಯನ್ನು ಇತರರು ನೋಡಬಹುದಾಗಿದೆ.

Edited By : Nagaraj Tulugeri
PublicNext

PublicNext

08/08/2021 07:35 am

Cinque Terre

47.73 K

Cinque Terre

5