ಬಳ್ಳಾರಿ: ಪ್ರತಿ ಸಲ ನನಗೆ ಸಣ್ಣ ಸಣ್ಣ ಖಾತೆ ನೀಡಿ ನಂತರ ವಾಪಸ್ ಪಡೆದುಕೊಳ್ಳಲಾಗುತ್ತಿದೆ. ಈ ಹಿಂದೆ ನಾನು ಸುಮ್ಮನಿದ್ದೆ. ಆದರೆ ಈ ಸಲ ಸುಮ್ಮನಿರೋಲ್ಲ. ನಾನೇನು ಅಪರಾಧ ಮಾಡಿಲ್ಲ. ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಯಾವುದೇ ಗಂಭೀರ ಆರೋಪಗಳು ನನ್ನ ಮೇಲಿಲ್ಲ. ಬಿಜೆಪಿ ಸರ್ಕಾರ ಬರೋದಿಕ್ಕೆ ನಾನೇ ಮೊಟ್ಟ ಮೊದಲು ರಾಜೀನಾಮೆ ಕೊಟ್ಟು ಇಲ್ಲಿಗೆ ಬಂದವನು. ಆದ್ರೆ ನನಗೆ ಸಣ್ಣ ಖಾತೆ ನೀಡಲಾಗಿದೆ ಎಂದು ಸಚಿವ ಹಾಗೂ ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತೊಮ್ಮೆ ಮಾಧ್ಯಮಗಳ ಮುಂದೆ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಸುಮ್ಮನೆ ಬಿಡಲ್ಲ. ಅದು ಅಂತ್ಯ ಆಗುವವರೆಗೂ ಹೋರಾಡುತ್ತೆನೆ. ನಾನು ಅಂದುಕೊಂಡಿದ್ದನ್ನು ಮಾಡೋವರೆಗೂ ಬಿಡೋದಿಲ್ಲ ನಾನು ಹಠವಾದಿ. ಹೋಗಿ ಕೇಳುತ್ತೇನೆ. ಸಿಎಂ ಗೆ ಒತ್ತಡ ಹೇರುತ್ತೇನೆ. ನನ್ನ ಬೇಡಿಕೆ ಈಡೇರುವವರೆಗೂ ವಿರಮಿಸೋದಿಲ್ಲ ಎಂದು ಆನಂದ್ ಸಿಂಗ್ ಕಡ್ಡಿ ಮುರಿದಂತೆ ಹೇಳಿದ್ದಾರೆ.
PublicNext
08/08/2021 07:26 am