ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾತೆ ಕ್ಯಾತೆ : ಅತ್ತ ಪ್ರೀತಂಗೌಡ, ಇತ್ತ ಆನಂದ್ ಸಿಂಗ್ ಸಿಎಂ ವಿರುದ್ಧ ಆಕ್ರೋಶ!

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆಯ 2 ದಿನಗಳ ಬಳಿಕ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಅಧಿಕೃತ ಪಟ್ಟಿ ಹೊರಡಿಸಿದ್ದಾರೆ. ಆದರೆ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ.

ಖಾತೆ ಹಂಚಿಕೆ ಕುರಿತು ಕೆಲವರಿಗೆ ಅಸಮಾಧಾನ ಆಗಿರುವುದು ನಿಜ. ಎಲ್ಲರನ್ನೂ ಕರೆದು ಚರ್ಚಿಸಿ ಸರಿಪಡಿಸುವೆ. ಸಚಿವ ಆನಂದ್ ಸಿಂಗ್ ಮತ್ತು ಶಾಸಕ ಪ್ರೀತಂ ಗೌಡ ವ್ಯಕ್ತಪಡಿಸಿದ ಅಭಿಪ್ರಾಯಗಳು ನನ್ನ ಗಮನಕ್ಕೆ ಬಂದಿದೆ. ಅವರಿಬ್ಬರು ಸೇರಿದಂತೆ ಅಸಮಾಧಾನಿತ ಎಲ್ಲರೊಂದಿಗೂ ಮಾತನಾಡುವೆ. ಶೀಘ್ರವೇ ಎಲ್ಲ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನೂತನ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ‘ನಾನು ಕೇಳಿದ್ದೇ ಒಂದು, ಕೊಟ್ಟಿರೋದೇ ಮತ್ತೊಂದು. ನನಗೆ ಕೊಟ್ಟಿರುವ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಳುವೆ. ಕೊಡದಿದ್ದರೆ ನನ್ನ ದಾರಿಯನ್ನ ನಾನೇ ನೋಡಿಕೊಳ್ಳುವೆ’ ಎಂದು ಆನಂದ್ ಸಿಂಗ್ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಅತ್ತ ಶಾಸಕ ಪ್ರೀತಂ ಗೌಡ, ‘ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಸಿಎಂ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗುವ ಔಚಿತ್ಯವೇನಿತ್ತು? ಇದರಿಂದಾಗಿಯೇ ಹಳೇ ಮೈಸೂರು ಭಾಗಕ್ಕೆ ಮತ್ತು ನನಗೆ ಸಚಿವ ಸ್ಥಾನ ತಪ್ಪಿದೆ’ ಕಿಡಿಕಾರಿದ್ದರು.

Edited By : Nirmala Aralikatti
PublicNext

PublicNext

07/08/2021 02:36 pm

Cinque Terre

31.93 K

Cinque Terre

0

ಸಂಬಂಧಿತ ಸುದ್ದಿ