ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಸಂಪುಟದಲ್ಲಿ ಹೊಸಬರಿಗೆ ಸೂಪರ್ ಖಾತೆ : ಹಳಬರಿಗೆ ಸೂಕ್ತ ಮನ್ನಣೆ…

ಅಳೆದು ತೂಗಿ ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ ಮಾಡಿದೆ. ಭಾರೀ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. 29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇನ್ನು ಈ ಬೊಮ್ಮಾಯಿ ಸಂಪುಟದಲ್ಲಿ ಮೊದಲ ಬಾರಿ ಸಚಿವರಾದವರಿಗೆ ಪ್ರಭಾವಿ ಖಾತೆ ನೀಡಿದ್ದರೆ, ಸಚಿವೆ ಶಶಿಕಲಾ ಜೊಲ್ಲೆಗೆ ಮುಜರಾಯಿ, ಹಜ್ ಇಲಾಖೆ ಜವಾಬ್ದಾರಿ ವಹಿಸಿರುವುದು ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ.

ಸ್ವತಃ ಸಿಎಂ ಬೊಮ್ಮಾಯಿ ಅವರು ಬೆಂಗಳೂರು ನಗರ ಅಭಿವೃದ್ಧಿ ಖಾತೆ, ಆರ್ಥಿಕ, ಸಂಸದೀಯ ವ್ಯವಹಾರ ಹಾಗೂ ಡಿಪಿಎಆರ್ ಹಾಗೂ ಹಂಚಿಕೆ ಆಗದ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇನ್ನು ಆರ್.ಅಶೋಕ್ ಅವರನ್ನು ಕಂದಾಯ ಖಾತೆಯಲ್ಲಿ, ವಿ.ಸೋಮಣ್ಣ ಅವರನ್ನು ವಸತಿ ಖಾತೆಯಲ್ಲಿಯೇ ಮುಂದುವರಿಸಿದ್ದಾರೆ.

ಕೆ.ಎಸ್.ಈಶ್ವರಪ್ಪ ಅವರನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆ, ಸಚಿವ ಗೋವಿಂದ ಕಾರಜೋಳ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ.

ಹಾಗೆಯೇ ಬಿ.ಸಿ.ಪಾಟೀಲ್-ಕೃಷಿ, ಎಸ್.ಟಿ.ಸೋಮಶೇಖರ್-ಸಹಕಾರ, ಡಾ.ಕೆ.ಸುಧಾಕರ್-ಆರೋಗ್ಯ, ವೈದ್ಯಕೀಯ ಶಿಕ್ಷಣ, ಕೆ.ಗೋಪಾಲಯ್ಯ-ಅಬಕಾರಿ, ಎಂಟಿಬಿ ನಾಗರಾಜ್-ಪೌರಾಡಳಿತ, ಸಣ್ಣ ಕೈಗಾರಿಕೆ ಖಾತೆಗಳಲ್ಲಿ ಮುಂದುವರಿಸಲಾಗಿದೆ.

ಇನ್ನು ಹೊಸದಾಗಿ ತಮ್ಮ ಮಂತ್ರಿ ಮಂಡಲಕ್ಕೆ ಸೇರಿಸಿಕೊಡಿರುವ ಸಚಿವರಿಗೂ ಸಹ ಮಹತ್ವದ ಖಾತೆಗಳನ್ನು ನೀಡಿದ್ದಾರೆ.

ಬಿ.ಸಿ.ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ , ವಿ. ಸುನಿಲ್ ಕುಮಾರ್ ಅವರಿಗೆ ಮಹತ್ವದ ಇಂಧನ ಖಾತೆ ನೀಡಲಾಗಿದೆ. ಆರಗ ಜ್ಞಾನೇಂದ್ರ ಅವರಿಗೆ ಪ್ರಮುಖ ಗೃಹ ಖಾತೆಯನ್ನು ನೀಡಲಾಗಿದೆ. ಮುನಿರತ್ನ ಅವರಿಗೆ ತೋಟಗಾರಿಕೆ, ಹಾಲಪ್ಪ ಆಚಾರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗಣಿ ಭೂ ವಿಜ್ಞಾನ ಖಾತೆ ವಹಿಸಲಾಗಿದೆ.

ಜೆ.ಸಿ.ಮಾಧುಸ್ವಾಮಿ-ಸಣ್ಣ ನೀರಾವರಿ, ಉಮೇಶ್ ಕತ್ತಿ ಅವರಿಗೆ ಆಹಾರ ಮತ್ತು ಅರಣ್ಯ ಇಲಾಖೆ, ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಉನ್ನತ ಶಿಕ್ಷಣ ಐಟಿ-ಬಿಟಿ, ಆನಂದ್ ಸಿಂಗ್ ಅವರಿಗೆ ಪರಿಸರ ಮತ್ತು ಪ್ರವಾಸೋದ್ಯಮ, ಪ್ರಭು ಚೌಹಾಣ್ ಪಶುಸಂಗೋಪನೆ, ಮುರುಗೇಶ್ ನಿರಾಣಿ ಅವರಿಗೆ ಬೃಹತ್ -ಮಧ್ಯಮ ಕೈಗಾರಿಕೆ, ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ, ಎಸ್.ಅಂಗಾರ ಅವರಿಗೆ ಮೀನುಗಾರಿಕೆ, ಬಂದರು ಜವಾಬ್ದಾರಿ ವಹಿಸಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ-ಸಮಾಜಕಲ್ಯಾಣ, ಕೆ.ಸಿ.ನಾರಾಯಣಗೌಡ-ಕ್ರೀಡೆ, ಭೈರತಿ ಬಸವರಾಜ್-ನಗರಾಭಿವೃದ್ಧಿ, ಸಿ.ಸಿ.ಪಾಟೀಲ್-ಲೋಕೋಪಯೋಗಿ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ-ಜವಳಿ ಖಾತೆ ನೀಡಲಾಗಿದೆ.

Edited By : Nirmala Aralikatti
PublicNext

PublicNext

07/08/2021 01:20 pm

Cinque Terre

32.38 K

Cinque Terre

1

ಸಂಬಂಧಿತ ಸುದ್ದಿ