ಬೆಂಗಳೂರು : ಬಿಎಸ್ ವೈ ಹಾಗೂ ಕುಟುಂಬದ ಭ್ರಷ್ಟಾಚಾರ ಪ್ರಕರಣದ ವಿರುದ್ಧ ಸಿಬಿಐ ಅಥವಾ ಎಸ್ ಐಟಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ತಾಂತ್ರಿಕ ಕಾರಣದಿಂದ ಇಂದು ವಾಪಸ್ ಪಡೆದಿದ್ದಾರೆ.ಈ ಹಿಂದೆ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಅಬ್ರಾಹಂ ಅವರು ಖಾಸಗಿ ದೂರು ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪೂರ್ವಾನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೂರನ್ನು ವಜಾಗೊಳಿಸಿತ್ತು.
ಈ ಆದೇಶ ಪ್ರಶ್ನಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಈಗಾಗಲೇ ಪ್ರತಿ ವಾದಿಗಳಿಗೆ (ಬಿಎಸ್ ವೈ, ವಿಜಯೇಂದ್ರ) ನೋಟಿಸ್ ಜಾರಿ ಮಾಡಿದೆ. ಆದ್ರೆ, ಸಿಬಿಐ ತನಿಖೆಗೆ ಕೋರಿದ್ದ ರಿರ್ಟ್ ಅರ್ಜಿಯನ್ನು ಅಬ್ರಾಹಂ ವಾಪಸ್ ಪಡೆದುಕೊಂಡಿದ್ದಾರೆ.
PublicNext
06/08/2021 05:24 pm