ದಾವಣಗೆರೆ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ದಾವಣಗೆರೆಯ ಬಾತಿ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಇಡಿ ಅಧಿಕಾರಿಗಳು ಯಾಕೆ ದಾಳಿ ಮಾಡಬಾರದು ನೀವೇ ಹೇಳಿ ಎಂದು ಪ್ರಶ್ನಿಸಿದರು.
ನಾವು ಮಾಡಿದ್ದೆಲ್ಲಾ ಸರಿ ಎನ್ನುವಂತಾಗಬಾರದು. ನನ್ನ ಮನೆ ಮೇಲೂ ದಾಳಿ ಮಾಡಿದ್ರೂ ನಂದೇನು ತಕರಾರಿಲ್ಲ. ಕಾನೂನು ಪ್ರಕಾರ ದಾಳಿ ಮಾಡಿದ್ರೆ ತಪ್ಪೇನಿದೆ ಎಂದ ಅವರು, ಸಿಎಂ ಬಸವರಾಜ್ ಬೊಮ್ಮಾಯಿಗೆ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಒತ್ತಡ ಇತ್ತು. ಯಾರೇ ಸಿಎಂ ಆದರೂ ಇಂಥ ಸ್ಥಿತಿಯಲ್ಲಿ ಒತ್ತಡ ಇದ್ದೇ ಇರುವುದು ಸಹಜ ಎಂದ್ರು.
ಜಾತಿವಾರು ಹೇಗೆ ಸಚಿವ ಸ್ಥಾನ ನೀಡ್ತಾರೋ ಹಾಗೆ ಎಲ್ಲ ಜಿಲ್ಲೆಗಳು ಸಚಿವ ಸ್ಥಾನ ನೀಡಬೇಕಿತ್ತು. ಪ್ರಾದೇಶಿಕವಾರು ಸಿಎಂ ಪ್ರಾತಿನಿಧ್ಯ ನೀಡಬೇಕಿತ್ತು ಎಂದು ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು.
PublicNext
06/08/2021 01:47 pm