ಹಿರಿಯೂರು : ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಹಾಗೂ ರಾಜ್ಯದ ಗೊಲ್ಲ ಸಮುದಾಯದ ಏಕೈಕ ಶಾಸಕಿಯಾಗಿರುವ ಕೆ. ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಸಚಿವಸ್ಥಾನ ನೀಡುವಂತೆ ಆಗ್ರಹಿಸಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಗ್ರಾಮದಲ್ಲಿ ನಡೆದಿದೆ.
ತನ್ನ ನೆಚ್ಚಿನ ಶಾಸಕಿಗೆ ಸಚಿವ ಸ್ಥಾನ ನೀಡಿ ಎಂದು ಬಿಜೆಪಿ ಕಾರ್ಯಕರ್ತರು ಧರ್ಮಪುರ ಹೋಬಳಿ ಯಿಂದ ಹಿರಿಯೂರು ನಗರಕ್ಕೆ ಪಾದಯಾತ್ರೆ ಕೈಗೊಂಡು ಸರ್ಕಾರದ ವಿರುದ್ಧ ಆಕ್ರೋಶ, ಆವೇಶ ವ್ಯಕ್ತಪಡಿಸಿದರು. ಒಂದು ವಾರದಿಂದ ಮಾಧ್ಯಮಗಳಲ್ಲಿ ನಮ್ಮ ನಾಯಕಿಯ ಹೆಸರು ತೋರಿಸಿ ಪೂರ್ಣಿಮಾ ಸಚಿವರಾಗುತ್ತಾರೆ ಎನ್ನಲಾಗುತ್ತಿತ್ತು. ಸಿಎಂ ಖುದ್ದಾಗಿ ಕರೆ ಮಾಡಿ ತಿಳಿಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಅರ್ಧಗಂಟೆಯಲ್ಲಿ ಏಕಾಏಕಿ ಹೆಸರು ಬದಲಿಸಿರುವುದನ್ನು ಖಂಡಿಸಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರು ರೊಚ್ಚಿಗೆದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
30 ಕಿಲೋ ಮೀಟರ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದು, ಈ ಪಾದಯಾತ್ರೆ ಮಾಧ್ಯಹ್ನ ಮೂರು ಗಂಟೆಗೆ ಹಿರಿಯೂರು ನಗರದ ತಲುಪಲಿದೆ. ಮತ್ತೊಂದು ಕಡೆಯಿಂದ ಜೆ. ಜಿ. ಹಳ್ಳಿ ಹೋಬಳಿಯ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಹಿರಿಯೂರು ನಗರ ತಲುಪಲಿದ್ದು ಎರಡು ಕಡೆಯ ಪ್ರತಿಭಟನೆ ಮತ್ತೊಷ್ಟು ತೀವ್ರ ಗೊಳ್ಳಲ್ಲಿದೆ. ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಚಿತ್ರದುರ್ಗ.
PublicNext
06/08/2021 10:34 am