ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗದ ಕೆಲವು ಆಕಾಂಕ್ಷಿಗಳು ಈಗಾಗಲೇ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಅವರಲ್ಲಿ ಶಾಸಕ ಸಿದ್ದು ಸವದಿ ಸಹ ಇದ್ದಾರೆ. ಸಿಎಂ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದ್ದಾರೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ತೇರದಾಳದ ಶಾಸಕ ಸಿದ್ದು ಸವದಿ ಸಹ ಇದ್ದರು. ಆದರೆ ಕೊನೆ ಗಳಿಗೆ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ. ಹಾಗಾಗಿ ಆಕ್ರೋಶ ಹೊರಹಾಕಿದ ಅವರು ಬಕೆಟ್ ಹಿಡಿದವರಿಗೆ, ಲಾಬಿ ಮಾಡಿದವರಿಗೆ ಮಂತ್ರಿ ಸ್ಥಾನ ನೀಡಲಾಗುತ್ತಿದೆ. ಬೆನ್ನಿಗೆ ಚೂರಿ ಹಾಕಿದವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಕೆಂಡಾಮಂಡಲವಾಗಿದ್ದಾರೆ.
ಈ ಸಚಿವ ಸಂಪುಟದಲ್ಲಿ ಗಾಡ್ ಫಾದರ್ ಇದ್ದವರಿಗೆ ಅವಕಾಶವಿದೆ. ನನಗೆ ಯಾವ ಗಾಡ್ ಫಾದರ್ ಇಲ್ಲ ಹೀಗಾಗಿ ಅವಕಾಶ ಸಿಕ್ಕಿಲ್ಲ. ಶಾಸಕಾಂಗ ಸಭೆಯಲ್ಲಿ ನಾನು ಇದನ್ನು ಪ್ರಶ್ನೆ ಮಾಡುತ್ತೇನೆ. ಒಬ್ಬೊಬ್ಬರಿಗೆ ಮೂರ್ನಾಲ್ಕು ಬಾರಿ ಮಂತ್ರಿ ಮಾಡಿದ್ದಾರೆ. ಮೂರ್ನಾಲ್ಕು ಬಾರಿ ಅಧಿಕಾರ ಅನುಭವಿಸಿದವರಿಗೆ ಏನ್ ಹೇಳೋದು ಎಂದು ತೇರದಾಳ ಶಾಸಕ ಸಿದ್ದು ಸವದಿ ಆಕ್ರೋಶ ಹೊರಹಾಕಿದ್ದಾರೆ.
PublicNext
05/08/2021 07:44 am