ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೋವಿ ಸಮುದಾಯಕ್ಕೆ ಕೈತಪ್ಪಿದ ಮಂತ್ರಿ ಪದವಿ, ಭೋವಿ ಶ್ರೀಗಳು ಅಸಮಾಧಾನ

ಚಿತ್ರದುರ್ಗ : ಸಚಿವ ಸಂಪುಟ ಹಿನ್ನೆಲೆಯಲ್ಲಿ ಕೋಟೆ ನಾಡು ಚಿತ್ರದುರ್ಗದಲ್ಲಿ ಆಕ್ರೋಶ, ಆವೇಶ ಭುಗಿಲೆದ್ದಿದೆ. ಭೋವಿ ಜನಾಂಗಕ್ಕೆ ಸಚಿವ ಸ್ಥಾನ ಕೈ ತಪ್ಪಿದ್ದು, ಚಿತ್ರದುರ್ಗ ನಗರದಲ್ಲಿ ಬೋವಿಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಅಂದರೆ ಕೇವಲ ದಕ್ಷಿಣ ಭಾರತದ ಪಕ್ಷ ಎಂಬ ಹಣೆಪಟ್ಟಿ ಇತ್ತು. ಅಂತಹ ಹಣೆಪಟ್ಟಿಯಿಂದ ಪೂರ್ಣ ಪ್ರಮಾಣದ ಸರ್ಕಾರ ರಚನೆ ಶಕ್ತಿ ಇಲ್ಲದ ವೇಳೆ, ಭೋವಿ ಸಮುದಾಯದ ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ, ಶಿವರಾಜ್ ತಂಗಡಿ ಕೈ ಹಿಡಿದಿದ್ದರು. ದಕ್ಷಿಣ ಭಾರತದಲ್ಲಿ BJP ಬರಲು ನಮ್ಮ ಸಮಾಜವೇ ಕಾರಣ. ಬಿಜೆಪಿ ಅಸ್ತಿತ್ವ ಇರುವವರೆಗೂ ನಮ್ಮ ಸಮಾಜದ ಋಣದಲ್ಲಿರುವುದು ತೋರಿಸಿಕೊಳ್ಳಬೇಕು. ಪಕ್ಷಕ್ಕಾಗಿ ದುಡಿದ ಕಟ್ಟಾಳುಗಳಿದ್ದಾರೆ, ಹಿರಿಯ ನಾಯಕರಿದ್ದಾರೆ. BJP ಸರ್ಕಾರ ರಚನೆಗೆ ನಾಲ್ಕು ಜನ ಶಾಸಕರು ನಮ್ಮ ಸಮಾಜದವರಿದ್ದಾರೆ.

ನಮ್ಮ ಸಮಾಜಕ್ಕೆ ಮಲತಾಯಿ ದೋರಣೆ ಆಗುತ್ತಿದೆ ಅಸಮಾಧಾನ ಹೊರಹಾಕಿದ್ದಾರೆ. ಅರವಿಂದ ಲಿಂಭಾವಳಿಗೆ ಮಂತ್ರಿ ಸ್ಥಾನ ನೀಡಿ, ಈಗ ಕೈ ಬಿಟ್ಟಿದ್ದಾರೆ. ಇಬ್ಬರೂ ಮಂತ್ರಿಗಳು ಇರುತ್ತಾರೆ ಎಂದು ಚರ್ಚೆ ಇತ್ತು. ಬೋವಿ ಸಮಾಜಕ್ಕೆ ಒಂದು ಮಂತ್ರಿ ಸ್ಥಾನವೂ ನೀಡಿಲ್ಲ, ಎಂದು ಖಂಡಿಸಿದರು.ಬ್ರಾಹ್ಮಣರ ಪಕ್ಷ ಎಂಬ ಹಣೆಪಟ್ಟಿ ಇತ್ತು, ಇದನ್ನ ಸರಿದೂಗಿಸಲು ಇದು ಸಂದರ್ಭವಾಗಿತ್ತು. ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನ ನೀಡಬೇಕಿತ್ತು. ಶೋಷಿತ ಸಮುದಾಯಗಳು BJP ಹಿಂದ ಹಿಮ್ಮುಖವಾಗಿ ಹೋಗುವ ಸಮಯ ಬರುತ್ತದೆ. ಬಿಜೆಪಿ ನಮ್ಮ ಸಮಾಜನ್ನ ನಿರ್ಲಕ್ಷ್ಯ ಮಾಡಿದೆ.

ಇದೆಲ್ಲಾ ಮುಗಿದ ಬಳಿಕ ಎಲ್ಲರೂ ಸೇರಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಹೈಕಮಾಂಡ್ ಚರ್ಚೆ ಬಳಿಕ ಸಂದೇಶ ಕಳಿಸುತ್ತೇವೆ ಎಂದು ಶ್ರೀಗಳು ತಿಳಿಸಿದರು.

Edited By : Nagesh Gaonkar
PublicNext

PublicNext

04/08/2021 05:39 pm

Cinque Terre

68.83 K

Cinque Terre

4

ಸಂಬಂಧಿತ ಸುದ್ದಿ