ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆಗೆ ಮುಹೂರ್ತ ಕೊನೆಗೂ ನಿಗದಿಯಾಗಿದೆ. ಸಂಪುಟ ಪಟ್ಟಿಯನ್ನು ಅಂತಿಮಗೊಳಿಸಿಕೊಂಡೇ ತವರಿಗೆ ಮರಳಲು ಸಂಕಲ್ಪ ತೊಟ್ಟು ರಾಷ್ಟ್ರ ರಾಜಧಾನಿಯಲ್ಲಿ ಠಿಕಾಣಿ ಹೂಡಿದ್ದ ಸಿಎಂ ಬೊಮ್ಮಾಯಿ, ಹೈಕಮಾಂಡ್ ಹೇಳಿದ ತಿದ್ದುಪಡಿಗಳ ಜೊತೆಗೆ ಕೇಂದ್ರ ನಾಯಕರಿಗೆ ಒಲವಿರುವ ಒಂದಷ್ಟು ಮಂದಿಯನ್ನು ಸಚಿವರ ಪಟ್ಟಿಯಲ್ಲಿ ಸೇರಿಸಿ, ಅಂತೂ ಇಂತು ಒಪ್ಪಿಗೆ ಪಡೆದಿದ್ದಾರೆ.
ನಾಳೆ ಅಂದರೆ ಬುಧವಾರ (ಆಗಸ್ಟ್4)ರಂದು ಸಂಜೆ 5 ಗಂಟೆಗೆ 26 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಶಶಿಕಲಾ ಜೊಲ್ಲೆ, ಶ್ರೀನಿವಾಸ ಪೂಜಾರಿ, ಲಕ್ಷಣ ಸವದಿ, ವಿ. ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ಇಳಿಸಲಾಗಿದ್ದು, ಡಿಸಿಎಂ ಸ್ಥಾನ ಕಳೆದುಕೊಂಡರೂ ಸಚಿವ ಸ್ಥಾನ ಉಳಿಸಿಕೊಳ್ಳುವಲ್ಲಿ ಗೋವಿಂದ ಕಾರಜೋಳ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಆರ್. ಶಂಕರ್, ಪ್ರಭು ಚೌಹಾಣ್ ಅವರನ್ನು ಕೈಬಿಡಲಾಗಿದೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಶ್ರೀರಾಮುಲು ದಿನದಿಂದ ದಿನಕ್ಕೆ ತಮ್ಮ ಸ್ಥಾನವನ್ನು ಬಿಜೆಪಿಯಲ್ಲಿ ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಡಿಸಿಎಂ ಹುದ್ದೆಯನ್ನು ಹಿಂಪಡೆದು, ಸಚಿವ ಸ್ಥಾನ ಮಾತ್ರ ಶ್ರೀರಾಮುಲು ಅವರಿಗೆ ನೀಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
PublicNext
03/08/2021 07:28 pm