ಚಿತ್ರದುರ್ಗ : ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸ್ಥಾನಕ್ಕಾಗಿ ಶಾಸಕರು ಬಾರಿ ಲಾಬಿ ನಡೆಸುತ್ತಿದ್ದಾರೆ. ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ ಶೇಖರ್ ಕೂಡ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಬಿಜೆಪಿ ಪಕ್ಷದಲ್ಲಿ ನನಗೆ ಯಾರು ಗಾಡ್ ಫಾದರ್ ಇಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಗೂಳಿಹಟ್ಟಿ ದಕ್ಷಿಣ ಭಾರತದಲ್ಲಿ ಬಿಜೆಪಿ ತಂದ ಮೊದಲ ವ್ಯಕ್ತಿ ಗೂಳಿಹಟ್ಟಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ 2008 ಮಂತ್ರಿ ಮಾಡುವಾಗ ಅನ್ಯಾಯ ಮಾಡಿದ್ದರು. ನನ್ನ ಕರೆದುಕೊಂಡು ಹೋದವರು ಮೂರು ಮಂತ್ರಿಗಳಾದರು ಎಂದು ಹೇಳಿದರು.
ಗೂಳಿಹಟ್ಟಿ ಶೇಖರ್ ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ಬಿಂಬಿಸಿದರು. ನಾನೊಬ್ಬ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದ ಎಸ್ಸಿ ಸಮುದಾಯದ ವ್ಯಕ್ತಿಯಾಗಿದ್ದೆನೆ. ಮೋದಿ ಅಲೆಯಲ್ಲೂ ನಾನು ಹಿಂದೆ JDSನಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಎರಡು ಲಕ್ಷ ಮತ ಪಡೆದಿದ್ದೆ.
ಆಗ ಬಿಜೆಪಿ ಕೂಡಾ ಸೋತಿತ್ತು. ಹಿಂದಿನ ಎಂ.ಪಿ ಎಲೆಕ್ಷನ್ ನಲ್ಲಿ ನಾನು 30 ಲೀಡ್ ಕೊಟ್ಟಿದ್ದೇವೆ ಎಂದರು. ಮಂತ್ರಿ ಸ್ಥಾನ ಹಿಂದೆ ಅನ್ಯಾಯವಾಗಿದೆ, ಈಗ ಕೊಡಿ ಎಂದು ಕೇಳಿದ್ದೇವೆ. ಹೈಕಮಾಂಡ್ ನಾಯಕರು ಎಲ್ಲರೂ ಸೇರಿ ಕೇಂದ್ರ ಸರ್ಕಾರ ಮಾದರಿಯಲ್ಲಿ ಸಚಿವ ಸಂಪುಟ ಮಾಡಿದರೆ ನಮಗೆ ಅವಕಾಶ ಸಿಗುತ್ತದೆ. ಇಲ್ಲವಾದರೆ ಬೇಕಾ ಬಿಟ್ಟಿ ಸಂಪುಟ ರಚನೆ ಮಾಡಿದರೆ ನಮಗೆ ಅವಕಾಶ ಸಿಗಲ್ಲ.
ನಾನು ಯಾವುದೇ ನಾಯಕರನ್ನ ಭೇಟಿ ಮಾಡಿಲ್ಲ, ನನಗೆ ಗಾಡ್ ಫಾದರ್ ಇಲ್ಲ, ನಾನು ಯಾವಾಗಲೂ ಕೂಡಾ ಕ್ಷೇತ್ರದಲ್ಲಿ ಇರುತ್ತೇನೆ ಎಂದರು. ನಾನು ಸಚಿವ ಸ್ಥಾನ ಪಡೆಯಲು ದೆಹಲಿ, ಬೆಂಗಳೂರಿಗೆ ನಾನು ಹೋಗಿಲ್ಲ, ಯಡಿಯೂರಪ್ಪ ಅವರನ್ನು ಭೇಟಿಯಷ್ಠೆ ಮಾಡಿದ್ದೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ನೋವಿನಲ್ಲಿ ಇದ್ದರು.
ಅವರಿಂದ ಸಹಾಯ ಪಡೆದುಕೊಂಡಿದ್ವಿ ಆಗಾಗಿ ಸೌಜನ್ಯಕ್ಕೆ ಭೇಟಿ ಮಾಡಿ ಕಾಲಿಗೆ ನಮಸ್ಕಾರ ಹಾಕಿ ಬಂದಿದ್ದೆ. ಆಗ ಪದವಿ ವಿಚಾರವಾಗಿ ಯಾವುದೇ ಪ್ರಸ್ತಾಪ ಮಾಡಿಲ್ಲ, ಹಿಂದೆ ಅವಕಾಶ ಮಾಡಿ ಕೊಡಿ ಎಂದು ಭೇಟಿ ಮಾಡ್ತಿದ್ದೆ, ಈಗ ನೋವಿನಲ್ಲಿ ಇದ್ದಾರೆ ಎಂದು ತಿಳಿಸಿದರು. ಈಗಿನ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅವರಿಗೂ ಅಭಿನಂದನೆ ಅಷ್ಟೇ ಸಲ್ಲಿಸಿ ಬಂದಿದ್ದೇನೆ. ಆಪರೇಷನ್ ಕಮಲದಲ್ಲಿ ಬಂದ ಎಲ್ಲರಿಗೂ ಉತ್ತಮ ಸ್ಥಾನ ನೀಡುತ್ತಾರೆ. ಪಕ್ಷದಲ್ಲಿ ಇರುವವರೆಗೂ ನೀಯತ್ತಾಗಿ ಇರುತ್ತೇನೆ. ನಾನು ಪಕ್ಷೇತರನಾಗಿ ಬಂದವನು, ಪಕ್ಷದಲ್ಲಿ ಇರುವವರೆಗೂ ನಿಯತ್ತಾಗಿ ಇರುವೆ.
ಪಕ್ಷದ ತೀರ್ಮಾನಕ್ಕೆ ನಾನು ಬದ್ದ, ಪಕ್ಷ ನಿಷ್ಠೆ ನಮ್ಮಲ್ಲಿ ಇದೆ ಎಂದರು. ನಮ್ಮ ಶಕ್ತಿ ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ ನಲ್ಲಿ ತೋರಿಸುತ್ತೇನೆ ಎಂದು ಗೂಳಿಹಟ್ಟಿ ತಿಳಿಸಿದರು. ನಮ್ಮ ಪಕ್ಷವನ್ನ ಗೆಲ್ಲಿಸುತ್ತೇವೆ, ಪಕ್ಷದ ಪರ ಇರುತ್ತೇವೆ, ಡಬಲ್ ಗೇಮ್ ಆಡಲ್ಲ.ಟೀ ಪಾರ್ಟಿ ಮಾಡಿಕೊಂಡು ಮಂತ್ರಿಗಳಾದರು.
ನಮ್ಮ ಹೇಳಿಕೆ ಮಾಡಿಸಿ ಮಂತ್ರಿಗಳಾದರು. ಕೆಲವರು ಬ್ಲಾಕ್ ಮೇಲ್ ಮಂತ್ರಿ ಆಗುತ್ತಾರೆ. ಪಕ್ಷದಲ್ಲಿ ಇದ್ದು ನಾನು ಜಾಸ್ತಿ ಮಾತನಾಡುವುದಿಲ್ಲ. ಮಂತ್ರಿ ಸ್ಥಾನ ನೀಡಿಲ್ಲ ಎಂದರು ಪಕ್ಷದಲ್ಲಿ ಇರುತ್ತೇನೆ. ನನ್ನ ವಾಟ್ಸಪ್ ಸ್ಟೇಟಸ್ ನನ್ನ ಹಾಜರಾತಿ ಎಂದು ಶೇಖರ್ ಪಕ್ಷದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
PublicNext
03/08/2021 11:09 am