ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಯಾರು ಕೂಡ ಯಾರ ರಬ್ಬರ್ ಸ್ಟಾಂಪ್ ಆಗೋಕೆ ಆಗಲ್ಲ: ಕೌರವ...!

ಹಾವೇರಿ: ಯಾರು ಯಾರ ರಬ್ಬರ ಸ್ಟಾಂಪ್ ಆಗೊಕೆ ಆಗೊಲ್ಲಾ. ಮನೆಯಲ್ಲಿ ತಂದೆ ಹಿರಿಯತನ ಬೇಡಾ ಎಂದು ಮಕ್ಕಳಿಗೆ ಕೊಡುತ್ತಾನೆ. ತಕ್ಷಣ ತಂದೆಯನ್ನು ಮನೆಯಿಂದ ಹೊರಗೆ ಹಾಕೋಕೆ ಆಗುತ್ತಾ. ತಂದೆ ಯಾವುತ್ತು ಸಲಹೆ ಸೂಚನೆಗಳನ್ನು ಕೊಡುತ್ತಾರೊ ಅದರಂತೆ. ಯಡಿಯೂರಪ್ಪ ನವರು ಉತ್ತಮ ಸಲಹೆಗಳನ್ನು ಕೊಡ್ತಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಿರೇಕೆರೂರನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದರ ಅರ್ಥ ಅವರು ರಬ್ಬರ ಸ್ಟಾಂಪ್ ಇವರ ಶ್ಯಾಡೊ ಅಲ್ಲಾ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗ ರಾಹುಲ್ ಗಾಂಧಿ ರಬ್ಬರ್ ಸ್ಟಾಂಪ್ ಆಗಿದ್ದರು.

ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ರಬ್ಬರ್ ಸ್ಟಾಂಪ್ ಆಗಿದ್ದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ಯಡಿಯೂರಪ್ಪ ಹೋದ ಬಳಿಕ ನಮಗೆ ಯಾವ ಹೆದರಿಕೆ ಇಲ್ಲಾ. ಎಂದೂ ಯಾವತ್ತು ಆತಂಕ ಅಭದ್ರತೆ ಕಾಡಿಲ್ಲಾ.

ಯಡಿಯೂರಪ್ಪ ನವರು ಇಳಿವಯಸ್ಸಿನಲ್ಲೂ ಸಮರ್ಪಕವಾಗಿ ಆಡಳಿತ ಮಾಡಿದ್ದಾರೆ. ಅವರು ಸಿಎಂ ಸ್ಥಾನದಿಂದ ಇಲ್ಲಾ ಹಾಗಂತ ಅವರು ಎಲ್ಲೂ ಹೋಗಿಲ್ಲಾ ಎಂದರು.

Edited By : Shivu K
PublicNext

PublicNext

03/08/2021 10:38 am

Cinque Terre

89.35 K

Cinque Terre

5

ಸಂಬಂಧಿತ ಸುದ್ದಿ