ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೇಸ್-ಬಿಜೆಪಿ ಬೆಂಕಿಕಡ್ಡಿ ಸೀಮೆಎಣ್ಣೆ ಇದ್ದಂತೆ ಅಂತ ಹೇಳಿದ್ದ ಮಹೇಶ್ 2018 ರ ಸಂದರ್ಶನದ ವೀಡಿಯೋ ಇದೀಗ ವೈರಲ್!!

ಚಾಮರಾಜನಗರ: ಕಾಂಗ್ರೇಸ್ – ಬಿಜೆಪಿ ಬೆಂಕಿ ಕಡ್ಡಿ ಮತ್ತು ಸೀಮೆಎಣ್ಣೆ ಇದ್ದಂತೆ ಅಂತ 2018 ರ ವಿಧಾನ ಸಭಾ ಚುನಾವಣೆಯಲ್ಲಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಶಾಸಕ ಎನ್. ಮಹೇಶ್ ಇದೀಗ ಬಿಜೆಪಿ ಸೇರುತ್ತಿದ್ದಾರೆ ಅಂತ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಎನ್. ಮಹೇಶ್ ರವರ ಸಂದರ್ಶನದ ತುಣಕನ್ನು ಹರಿಬಿಟ್ಟಿದ್ದಾರೆ.

ಶಾಸಕ ಎನ್. ಮಹೇಶ್ ಸಂದರ್ಶನದಲ್ಲಿ ಹೇಳಿಕೆ ನೀಡಿ, ಕಾಂಗ್ರೇಸ್ ಮತ್ತು ಬಿಜೆಪಿಯನ್ನು ದೂರು ಇಡುವ ಸಲುವಾಗಿ ಜೆಡಿಎಸ್ ಗೆ ಬಿಎಸ್ ಪಿ ಬೆಂಬಲ ಸೂಚಿಸುತ್ತಿದೆ ಎಂದು ಹೇಳಿಕೆ ನೀಡಿದ ಶಾಸಕ ಎನ್. ಮಹೇಶ್ ಮುಂದುವೆರೆದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನೂರು ದಿನದಲ್ಲಿ ಸ್ವಜ್ ನಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬ ನಾಗರೀಕರ ಬ್ಯಾಂಕ್ ಅಕೌಂಟ್ ಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಅಂತ ಹೇಳಿದ್ದರು, ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ಬರವಸೆ ನೀಡಿದ್ದರು ಆದರೆ ಏನು ಆಗಿಲ್ಲ ಅಂತ ಹೇಳಿರುವ ವೀಡಿಯೋ ಇದೀಗ ವೈರಲ್ ಆಗಿದೆ.

Edited By : Manjunath H D
PublicNext

PublicNext

02/08/2021 01:52 pm

Cinque Terre

84.14 K

Cinque Terre

7

ಸಂಬಂಧಿತ ಸುದ್ದಿ