ಕಲಘಟಗಿ: ಬಿಜೆಪಿಯವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬಲವಂತವಾಗಿ ರಾಜಿನಾಮೆ ಕೊಡಿಸಿ ಅವರನ್ನು ಮನೆಗೆ ಕಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನುಡಿದರು.
ಅವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿಗಾಗಿ ತೆರಳುವಾಗ ಮಾಜಿ ಸಚಿವರಾದ ಸಂತೋಷ್ ಲಾಡ್ ಅವರ ಕಲಘಟಗಿ ಹತ್ತಿರದ ಮಡ್ಕಿಹೊನ್ನಳ್ಳಿಯಲ್ಲಿನ ಅಮೃತ ನಿವಾಸಕ್ಕೆ ಆಗಮಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ,ಯಡಿಯೂರಪ್ಪ ಎಂದು ಮುಂಬಾಗಿಲಿನಿಂದ ಬಂದು ಮುಖ್ಯಮಂತ್ರಿ ಆದವರಲ್ಲ.ಕಾಂಗ್ರೆಸ್ 14 ಶಾಸಕರನ್ನು ಹಾಗೂ ಜೆಡಿಎಸ್ 3 ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡು ಸರಕಾರ ಬಿಳಿಸಿ ಮುಖ್ಯಮಂತ್ರಿಯಾದರು.ಆಗ ಮುಖಮಂತ್ರಿಯಾಗಿದ್ದ ಕುಮಾರಸ್ವಾಮಿ ಸಹ ಸರಕಾರ ಉಳಿಸಿಕೊಳ್ಳುವ ಪ್ರಯತ್ನಮಾಡಲಿಲ್ಲ.ಬೊಮ್ಮಾಯಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಕಾರಣರಾಗಿದ್ದು,ಅವರ ಅಣತಿಯಂತೆ ನಡೆಯುತ್ತಾರೆ ಎಂದರು.
ಶಾಸಕ ಸಂತೋಷ ಲಾಡ್ ಸ್ವಾಗತಿಸಿದರು.ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ,ಮಂಜುನಾಥ ಮುರಳ್ಳಿ,ಶಾಸಕರಾದ ಕುಸುಮಾವತಿ ಶಿವಳ್ಳಿ,ಮಾಜಿ ಶಾಸಕ ಎಂ ಎಸ್ ಅಕ್ಕಿ,ರಾಜಶೇಕರ ಮೆಣಸಿನಕಾಯಿ, ಇಸ್ಮಾಯಿಲ್ ತಮಟಗಾರ,ಎಸ್ ಆರ್ ಪಾಟೀಲ,ಅಜಮತ್ ಜಹಗೀರದಾರ,ಲಿಂಗರಡ್ಡಿ ನಡುವಿನಮನಿ ಉಪಸ್ಥಿತರಿದ್ದರು.
PublicNext
01/08/2021 09:57 pm