ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷವಾಗಿ ಸ್ನೇಹ ದಿನದ ಶುಭಾಶಯ ತಿಳಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ನಾವಿಬ್ಬರು, ನಮಗಿಬ್ಬರು' ಸರ್ಕಾರಕ್ಕೆ ಸ್ನೇಹ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಮೂಲಕ ಮೋದಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದು, ನಾವಿಬ್ಬರು, ನಮಗಿಬ್ಬರು ಎಂಬ ಸ್ಲೋಗೋನ್ ಹೇಳಿದ್ದಾರೆ. ನಾವಿಬ್ಬರು. ನಮಗಿಬ್ಬರು, ಈ ದೇಶ ನಡೆಯುತ್ತಿರುವುದು ನಾಲ್ವರಿಂದ ಮಾತ್ರ ಎಂದು ಅದರಲ್ಲಿ ಹೇಳಿದ್ದಾರೆ. ಜತೆಗೆ ವಿಡಿಯೋದಲ್ಲಿ ಇಂಗ್ಲಿಷ್ ಹಾಡನ್ನು ಪ್ಲೇ ಮಾಡಲಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ವಿವಿಧ ಕೈಗಾರಿಕೋದ್ಯಮದ ಜತೆ ಕೈ ಜೋಡಿಸಿರುವ ವಿಡಿಯೋ ಇದಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಮೋದಿ ಹಲವಾರು ಗಣ್ಯ ವ್ಯಕ್ತಿಗಳ ಕೈಕುಲುಕುತ್ತಿರುವುದನ್ನು ಕಾಣಬಹುದು. ಇದಕ್ಕೆ ರಾಹುಲ್ ಗಾಂಧಿ ಶೇಖ್ಹ್ಯಾಂಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
PublicNext
01/08/2021 08:50 pm