ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಬೊಮ್ಮಾಯಿ ಭೇಟಿಯಾದ ವಿನಯ್ ಗುರೂಜಿ

ಬೆಂಗಳೂರು : ಆರ್.ಟಿ ನಗರದಲ್ಲಿರುವ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ವಿನಯ್ ಗುರೂಜಿ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರಿಗೆ ಶುಭ ಕೋರಲು ಬಂದಿದ್ದೆ. ಅವರು ಮುಖ್ಯಮಂತ್ರಿಯಾಗಿರುವುದಕ್ಕೆ ಖುಷಿ ಆಗಿದೆ ಎಂದರು. ಅವರು ಈ ಹಿಂದೆಯೂ ಗೃಹ ಸಚಿವರು ಆಗಿದ್ದರು. ಹೀಗಾಗಿ ಸಿಎಂ ಸ್ಥಾನ ನಿಭಾಯಿಸುವುದು ಕಷ್ಟವಾಗಲ್ಲ. ಅವರ ತಂದೆಯ ಟ್ರೈನಿಂಗ್ ಅವರಿಗೆ ಸಾಕಲ್ವ ಎಂದು ವಿನಯ್ ಗುರೂಜಿ ಹೇಳಿದರು.

ಸಿಎಂಗೆ ಏನಾದರೂ ಸಲಹೆ ನೀಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ರಾಜಕೀಯ ದೂರ. ನಾನು ರಾಜಕೀಯ ನಾಯಕರಿಗೆ ಸಲಹೆ ಕೊಟ್ಟರೆ ತಮಾಷೆ ಆಗುತ್ತದೆ ಎಂದರು. ಕೊರೊನಾ ವಿಚಾರವಾಗಿ ಮಾತನಾಡಿದ ಅವರು, ಕೊರೊನಾ ಇದೆ. ಹೀಗಾಗಿ ವ್ಯಾಕ್ಸಿನ್ ಒಂದೇ ಅಲ್ಲ ಪ್ರಾಣಾಯಾಮ ಮಾಡಬೇಕು. ಕಷಾಯ ಸೇವಿಸಬೇಕು. ಅಲೋಪತಿ ಒಂದೇ ಸತ್ಯ ಅಲ್ಲ ಎಂದರು.

Edited By : Nirmala Aralikatti
PublicNext

PublicNext

01/08/2021 01:57 pm

Cinque Terre

41.39 K

Cinque Terre

2

ಸಂಬಂಧಿತ ಸುದ್ದಿ