ನವದೆಹಲಿ: ಪಶ್ಚಿಮಬಂಗಾಳದ ಬಿಜೆಪಿ ಮುಖಂಡ ಬಾಬುಲ್ ಸುಪ್ರಿಯೊ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿರುವುದಾಗಿ ಶನಿವಾರ(ಜುಲೈ 31) ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಬಾಬುಲ್ ಸುಪ್ರಿಯೋ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ 2014ರಿಂದ 2016ರ ಜುಲೈವರೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಖಾತೆ ಸಚಿವರಾಗಿದ್ದು, 2016ರಿಂದ 2019ರವರೆಗೆ ಭಾರೀ ಕೈಗಾರಿಕೆ ರಾಜ್ಯ ಖಾತೆ ಸಚಿವರಾಗಿದ್ದರು. ಆದರೆ ಇತ್ತೀಚೆಗಷ್ಟೇ ಸಚಿವ ಸಂಪುಟ ಪುನಾರಚನೆ ವೇಳೆ ಸುಪ್ರಿಯೊಗೆ ಯಾವುದೇ ಸ್ಥಾನ ಸಿಕ್ಕಿರಲಿಲ್ಲ. ಆ ಬಳಿಕ ಸುಪ್ರಿಯೊ ಫೇಸ್ ಬುಕ್ ನಲ್ಲಿ ಸತತವಾಗಿ ಟ್ವೀಟ್ ಮೂಲಕ ಅಸಮಧಾನ ಹೊರಹಾಕುತ್ತಿದ್ದರು.
ಗುಡ್ ಬೈ.ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಸೇರಿದಂತೆ ಬೇರೆ ಯಾವುದೇ ಪಕ್ಷಕ್ಕೆ ಹೋಗಲ್ಲ. ಯಾರೂ ನನ್ನ ಪಕ್ಷಕ್ಕೆ ಸೇರ್ಪಡೆಗೊಳ್ಳಿ ಎಂದು ಕರೆದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರಿಯೊ, ನಾನೀಗ ಏಕಾಂಗಿ ಆಟಗಾರನಾಗಿದ್ದೇನೆ. ನಾನು ಪಶ್ಚಿಮಬಂಗಾಳದ ಬಿಜೆಪಿ ಪಕ್ಷದಲ್ಲಿದ್ದೆ ಅಷ್ಟೇ ಎಂದು ತಿಳಿಸಿದ್ದಾರೆ.
ದೀರ್ಘ ಚರ್ಚೆಯ ನಂತರ ನಾನು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವ ನಿರ್ಧಾರ ತೆಗೆದುಕೊಂಡಿದ್ದು, ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ವಿವರಿಸಿದ್ದಾರೆ.
PublicNext
31/07/2021 06:53 pm