ಹುಬ್ಬಳ್ಳಿ- ಇಂತಹ ಪ್ರವಾಹ ಸಂದರ್ಭದಲ್ಲಿ ಬಿಜೆಪಿಯವರು ಅಧಿಕಾರಕ್ಕಾಗಿ ಓಡಾಡುತ್ತಿದ್ದಾರೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಾಟಚಾರಕ್ಕೆ ಉತ್ತರ ಕನ್ನಡ ಪ್ರವಾಸ ಮಾಡಿದ್ದಾರೆಂದು, ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಐದಾರು ಜಿಲ್ಲೆಯಲ್ಲಿ ನೆರೆ ಬಂದಿದೆ. ಬರೀ ಉತ್ತರ ಕನ್ನಡಕ್ಕೆ ಹೋಗಿ ಪರಿಹಾರ ಕೊಡ್ತಿನಿ ಅಂತ ದೆಹಲಿಗೆ ಹೋಗಿದ್ದಾರೆ ಇದು ಸರಿನಾ? ಇಲ್ಲಿ ಯಾರು ಮಂತ್ರಿಗಳಿಲ್ಲ, ರಾಜ್ಯದ ಜನರಿಗೆ ದ್ರೋಹ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಗೆ ಹೋಗಿ ನೆರೆ ಪರಿಹಾರ ಕೇಳಬೇಕು. ಕೂಡಲೆ ಮಂತ್ರಿ ಮಂಡಲ ಮಾಡೋ ಬಗ್ಗೆ ಕೇಳಬೇಕು. ಅಷ್ಟಕ್ಕೂ ಇವರಿಗೆ ಜನರ ಹಿತ ಮುಖ್ಯ ಅಲ್ಲ ಅನಿಸುತ್ತಿದೆ. ರಾಜ್ಯದಲ್ಲಿ ಜಿಲ್ಲಾ ಮಂತ್ರಿಗಳಿಲ್ಲ, ಇಂತಹ ಕೆಟ್ಟ ಪರಸ್ಥಿತಿ ರಾಜ್ಯದಲ್ಲಿ ಎಂದು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
PublicNext
30/07/2021 04:55 pm