ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂತ್ರಿ ಸ್ಥಾನ ಕೊಡದಿದ್ರೆ ವಿಜಯಪುರ ಜಿಲ್ಲೆಯಿಂದ ಶಾಕ್ ಕೊಡ್ತಾರಂತೆ ಯತ್ನಾಳ್

ವಿಜಯಪುರ: ಈ ಸಲ ಗೌರವದಿಂದ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಕೊಡದೇ ಇದ್ದರೆ, ಜಿಲ್ಲೆಯನ್ನ ಕಡೆಗಣಿಸಿದರೆ ಈ ಸಂಪುಟ ರಚನೆ ಮುಗಿದ ನಂತರ ವಿಜಯಪುರ ಜಿಲ್ಲೆಯಿಂದ ನಮ್ಮಿಂದ ಬಹುದೊಡ್ಡ ಶಾಕ್ ಕಾದಿದೆ ಎಂದು ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾಟೀಲ್ ತಮ್ಮದೇ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಕಸ್ಮಾತ್ ಯಡಿಯೂರಪ್ಪ ಅವರ ನೆರಳಿನಂತೆ ಈಗಿನವರೂ ಮುಂದುವರೆದಲ್ಲಿ ರಾಜ್ಯದಲ್ಲಿ ಆ ನೆರಳನ್ನೇ ಕಟ್ ಮಾಡುತ್ತೇವೆ ಎಂದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಲೇಬೇಕು. ಈಗಾಗಲೇ ಎ.ಎಸ್ ಪಾಟೀಲ್ ನಡಹಳ್ಳಿ ನಿಗಮ ಮಂಡಳಿ ಅಧ್ಯಕ್ಷರಿದ್ದಾರೆ. ಅವರು ಈಗ ಕ್ಲೇಮ್ ಆಗುವುದಿಲ್ಲ. ಈಗ ಆಗಬೇಕಿರುವುದು ಶಾಸಕ ಸೋಮನಗೌಡ ಪಾಟೀಲ್ ಹಾಗೂ ನನ್ನದು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

30/07/2021 04:16 pm

Cinque Terre

81.62 K

Cinque Terre

14

ಸಂಬಂಧಿತ ಸುದ್ದಿ