ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಾತಂತ್ರ್ಯ ದಿನಾಚರಣೆಯ ಪ್ರಧಾನಿ ಮೋದಿ ಭಾಷಣಕ್ಕಾಗಿ ಸಲಹೆ ನೀಡಲು ಅವಕಾಶ.!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ವೇಳೆ ತಮ್ಮ ಭಾಷಣಕ್ಕಾಗಿ ಸಲಹೆ ನೀಡುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಕಚೇರಿಯು, "ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕಾಗಿ ನಿಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳಿ. ನಿಮ್ಮ ಆಲೋಚನೆಗಳು ಕೆಂಪು ಕೋಟೆಯ ಮೇಲಿಂದ ದೇಶಕ್ಕೆ ಪ್ರತಿಧ್ವನಿಸುತ್ತವೆ" ಎಂದು ತಿಳಿಸಿದೆ.

ಈ ಮೊದಲು ಪ್ರಧಾನಿ ಮೋದಿ ಅವರು 'ಮನ್‌ ಕಿ ಬಾತ್‌'ನಲ್ಲಿ ಹಂಚಿಕೊಳ್ಳಬೇಕಾದ ವಿಚಾರಗಳ ಬಗ್ಗೆ ತಿಳಿಸುವಂತೆ ದೇಶದ ಜನತೆಗೆ ಕೇಳಿಕೊಂಡಿದ್ದರು. ಈ ಬಾರಿಯೂ ಅವರು ಸಾರ್ವಜನಿಕರಿಂದ ಸಲಹೆ ಕೇಳಿದ್ದಾರೆ. ದೇಶದ ಜನರು ತಮ್ಮ ಅಭಿಪ್ರಾಯಗಳನ್ನು MyGov ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ.

Edited By : Vijay Kumar
PublicNext

PublicNext

30/07/2021 02:27 pm

Cinque Terre

60.67 K

Cinque Terre

4

ಸಂಬಂಧಿತ ಸುದ್ದಿ