ಹುಬ್ಬಳ್ಳಿ: ನಾನು ನೈತಿಕತೆಯ ದೃಷ್ಟಿಯಿಂದ ಹಾಗೂ ನನ್ನ ಸ್ವಾಭಿಮಾನಕ್ಕೆ ದಕ್ಕೆ ಬರಬಾರದು ಎಂಬುವಂತ ನಿಟ್ಟಿನಲ್ಲಿ ಬೊಮ್ಮಾಯಿಯವರ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನಮಾನ ಬೇಡ ಎಂದು ಹೇಳಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಹೇಳಿದರು.
ನಗರದಲ್ಲಿಂದು ಕೇಶವ ಕುಂಜಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈಗಾಗಲೇ ಹೇಳಿದ್ದೇನೆ. ನಾನು ಸಿನಿಯರ್ ರಾಜಕಾರಣಿಯಾಗಿದ್ದೇನೆ. ನಾನು ಸಿಎಂ ಆಗಿ, ರಾಜ್ಯಾಧ್ಯಕ್ಷ ಆಗಿ ಕೆಲಸ ಮಾಡಿದವನು. ಹಿರಿಯ ನಾಯಕರಿದ್ದಾಗ ಸಚಿವನಾಗಿದ್ದೇ ಆದರೆ ಈಗ ಸಚಿವ ಸಂಪುಟದಲ್ಲಿ ಸ್ಥಾನಮಾನವನ್ನು ಪಡೆದುಕೊಳ್ಳಲು ನನಗೆ ಮನಸ್ಸಿಲ್ಲ. ಅಲ್ಲದೇ ಇದು ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದರು.
PublicNext
30/07/2021 10:42 am