ನವದೆಹಲಿ:ಪೆಗಾಸಸ್ ವಿವಾದದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ನೇರ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧರಂತೆ ಮಾತಾಡ್ತಿದ್ದಾರೆ ಎ೦ದಿದ್ದಾರೆ.
ರಾಹುಲ್ ಗಾಂಧಿ ವಾಗ್ದಾಳಿ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ವಿಷಯವಲ್ಲದ ವಿಚಾರವನ್ನು ಅನಗತ್ಯವಾಗಿ ಸಮಸ್ಯೆಯಾಗುವಂತೆ ಮಾಡಲಾಗುತ್ತಿದೆ. ವಿಶ್ವದ ಸಾವಿರಾರು ಜನರನ್ನು ಬೇಹುಗಾರಿಕೆ ಮಾಡಲು ಸಾಧ್ಯವೇ? ರಾಹುಲ್ ಗಾಂಧಿ ಏನು ಹೇಳುತ್ತಿದ್ದಾರೆಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಅದೇ ಅವರ ಮೂಲ ಸಮಸ್ಯೆ. ರಾಹುಲ್ ಗಾಂಧಿ ಅಪ್ರಬುಧ್ಧರಂತೆ ಮಾತನಾಡುತ್ತಾರೆಂದು ಕಿಡಿಕಾರಿದ್ದಾರೆ.
PublicNext
29/07/2021 04:26 pm