ಮೈಸೂರು: ಹೊಸ ಸಿಎಂ ಬಗ್ಗೆ ಈಗಲೇ ಏನೂ ಹೇಳೋಕಾಗಲ್ಲ. ಆದ್ರೆ ಅವರು ಸ್ವತಂತ್ರವಾಗಿ ಅವರು ಆಡಳಿತ ಮಾಡೋಕೆ ಸಾಧ್ಯನಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಹೆಸರು ಸೂಚಿಸಿರುವುದು ಯಡಿಯೂರಪ್ಪ. ಹೀಗಾಗಿ ಸರ್ಕಾರದ ಮೇಲೆ ಬಿಎಸ್‍ವೈ ಸಹಜವಾಗಿಯೇ ಹಿಡಿತ ಹೊಂದಿರುತ್ತಾರೆ. ಹೀಗಿರುವಾಗ ಬೊಮ್ಮಾಯಿ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಾಧ್ಯವಾ? ಎಂದಿದ್ದಾರೆ.
ಎಸ್.ಆರ್ ಬೊಮ್ಮಾಯಿಯವರ ಗುಣ ಮಗನಿಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಗಾಂಧಿ ಮಗ ಗಾಂಧಿಯಾಗಲಿಲ್ಲ. ಬದಲಾಗಿ ಕುಡುಕನಾದ. ಅದೇ ರೀತಿ ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
PublicNext
28/07/2021 09:08 pm