ವರದಿ: ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ: ತಾಲೂಕಿನ ಬೇಗೂರು ಗ್ರಾಮದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಶ್ರೀಗಳು ನುಡಿದ ಭವಿಷ್ಯ ಐದು ತಿಂಗಳಲ್ಲಿಯೇ ನಿಜವಾಗಿದೆ ಈ ಘಟನೆಗೆ ಆ ಪುಟ್ಟ ಗ್ರಾಮ ಸಾಕ್ಷಿಯಾಗಿತ್ತು.
ಹೌದು! ಇಂತಹದೊಂದು ಪವಾಡ ರೀತಿಯ ಭವಿಷ್ಯವಾಣಿಯ ಹಿಂದಿನ ಘಟನೆಯ ಸಂಪೂರ್ಣ ಚಿತ್ರಣ ಇಲ್ಲಿದೇ ನೋಡಿ,
ಐದು ತಿಂಗಳ ಹಿಂದೆ ತಾಲೂಕಿನ ಬೇಗೂರ ಗ್ರಾಮದ ಶ್ರೀ ಸಿದ್ಧಾರೂಢ ಅಮೃತ ಶೀಲಾ ಮೂರ್ತಿಯ ಪ್ರತಿಷ್ಠಾನೆ ಹಾಗೂ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಕಟ್ನೂರಿನ ಜ್ಞಾನಯೋಗಿ ಶ್ರೀ ಗುರು ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಜಿ,ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿ ಆಶೀರ್ವದಿಸಿ
ಮಾತನಾಡಿ,ಮುಂದೊಂದು ದಿನ ಶ್ರೀ ಸಿದ್ಧಾರೂಢ ಸ್ವಾಮೀಜಿಯ ಅನುಗ್ರಹದಿಂದ ಅವರು ಮುಂದೆ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಾರೆ ಎಂದು ನುಡಿದಿದ್ದರು.ಇಂದು ಶ್ರೀಗಳ ವಾಣಿ ನಿಜವಾಗಿದೆ.
PublicNext
28/07/2021 07:06 pm