ಹುಬ್ಬಳ್ಳಿ: ಬಿಎಸ್ ಯಡಿಯೂರಪ್ಪ ಬದಲಾವಣೆ ಮಾಡಿದ್ದು ಏಕೆ? ಬಿಎಸ್ ವೈ ಕಣ್ಣೀರ ಕಥೆ ಏನು? ಅವರು ಕೊರೊನಾ ನಿರ್ವಹಣೆ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಬದಲಾವಣೆ ಆಯ್ತಾ? ಈ ಬಗ್ಗೆ ಬಿಜೆಪಿ ಹೈಕಮಾಂಡ ಉತ್ತರ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ದುರ್ಬಲ ಸಿಎಂ ಆಗಿದ್ದರು, ಕೊರೊನಾ, ನೆರೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿರಂತರವಾಗಿ ಸಿಎಂ ರಾಜೀನಾಮೆ ಬಗ್ಗೆ ಆರೋಪ ಮಾಡುತ್ತಾ ಬರುತ್ತಿತ್ತು. ಈ ಕಾರಣಕ್ಕೆ ಬಿಜೆಪಿ ಬಿಎಸ್ ವೈ ರಾಜೀನಾಮೆ ತೆಗೆದುಕೊಂಡಿದೀಯಾ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡುತ್ತೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಸಹ ಸಾಮಾನ್ಯ ಕಾರ್ಯಕರ್ತರು. ಈ ಹಿನ್ನೆಲೆಯಲ್ಲಿ ಮುಂದಿನ ಸಿಎಂ ಕುರಿತು ಚುನಾವಣೆ ಗೆದ್ದ ನಂತರ ನಮ್ಮ ಪಕ್ಷದ ಶಾಸಕರು ಮತ್ತು ಹೈಕಮಾಂಡ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ವಿಷಯ ಅಪ್ರಸ್ತುತ ಎಂದರು.
PublicNext
28/07/2021 04:30 pm