ಬೆಂಗಳೂರು: ಬರ ಪರಿಹಾರ, ಕೋವಿಡ್ ನಿಯಂತ್ರಣ, ಜಿಎಸ್ಟಿ ಪಾಲು ಹಾಗೂ ಇನ್ನಿತರ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರ ರಾಜ್ಯದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ನೀವು ಈ ಎಲ್ಲ ವಿಚಾರಗಳನ್ನು ಕೇಂದ್ರದ ಗಮನಕ್ಕೆ ತಂದು ರಾಜ್ಯಕ್ಕೆ ನ್ಯಾಯ ಕೊಡಿಸಲು ಮೊದಲ ಆದ್ಯತೆ ಕೊಟ್ಟು ಕೆಲಸ ಮಾಡಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಸಿಎಂ ಅಥವಾ ಪಿಎಂ ಹುದ್ದೆ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಈ ಎರಡೂ ಹುದ್ದೆಗಳು ರಾಜ್ಯ ಮತ್ತು ದೇಶಕ್ಕೆ ಸಂಬಂಧಿಸಿದ ಹುದ್ದೆಗಳು. ಹಲವಾರು ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿ ಹಿಂದಿನ ಸಿಎಂಗೆ ಸಾಕಷ್ಟು ಬಾರಿ ಪತ್ರ ಮುಖೇನ ಮನವಿ ಮಾಡಿದ್ದೇನೆ. ಆದರೆ ಅವರು ಅದಕ್ಕೆ ಸ್ಪಂದಿಸುವ ಕನಿಷ್ಟ ಸೌಜನ್ಯವನ್ನೂ ತೋರಿಲ್ಲ. ನಮ್ಮ ನಡುವೆ ಅನೇಕ ಸೈದ್ದಾಂತಿಕ ಸಂಘರ್ಷಗಳಿವೆ. ಆದರೂ ನಾವು ರಾಜ್ಯದ ಏಳ್ಗೆಗಾಗಿ ಒಗ್ಗಟ್ಟಿನಿಂದ ದುಡಿಯಬೇಕಿದೆ. ಇದು ನಿಮಗಿಂತ ಅನುಭವ ಮತ್ತು ವಯಸ್ಸಿನಲ್ಲಿ ಹಿರಿಯನಾದ ನನ್ನ ಸಲಹೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
PublicNext
28/07/2021 04:13 pm